ರಾಹುಲ್ ಗಾಂಧಿ ಜತೆ ಡೇಟಿಂಗ್ ಮಾಡಲು ಬಯಸಿದ್ದ ಕರೀನಾ ಕಪೂರ್!

ಭಾನುವಾರ, 3 ಮಾರ್ಚ್ 2019 (09:18 IST)
ಮುಂಬೈ: ಸೈಫ್ ಅಲಿ ಖಾನ್ ರನ್ನು ಮದುವೆಯಾಗಿ ತೈಮೂರ್ ಅಲಿ ಖಾನ್ ಎಂಬ ಮುದ್ದಾದ ಮಗುವಿಗೆ ತಾಯಿಯಾಗಿರುವ ಬಾಲಿವುಡ್ ನಟಿ ಕರೀನಾ ಕಪೂರ್ ಒಂದು ಕಾಲದಲ್ಲಿ ರಾಹುಲ್ ಗಾಂಧಿ ಜತೆಗೆ ಡೇಟಿಂಗ್ ಮಾಡಲು ಬಯಸಿದ್ದರಂತೆ!


ಹಾಗಂತ ಅವರೇ ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಶನದ ವಿಡಿಯೋ ಈಗ ವೈರಲ್ ಆಗಿದೆ. ನೀವು ಯಾರ ಜತೆ ಡೇಟಿಂಗ್ ನಡೆಸಲು ಬಯಸುತ್ತೀರಿ ಎಂದಿದ್ದಕ್ಕೆ ಕರೀನಾ ಕೊಂಚ ಯೋಚಿಸಿ ರಾಹುಲ್ ಗಾಂಧಿ ಎಂದಿದ್ದರು.

ನಾನು ಮ್ಯಾಗಜಿನ್ ಒಂದರಲ್ಲಿ ಅವರ ಫೋಟೋಗಳನ್ನು ನೋಡುತ್ತಿದ್ದೆ. ನಾನು ಒಂದು ಸಿನಿಮಾ ಹಿನ್ನಲೆಯ ಕುಟುಂಬದಿಂದ ಬಂದವಳು. ಅವರು ಒಂದು ರಾಜಕೀಯ ಹಿನ್ನಲೆಯ ಕುಟುಂಬದಿಂದ ಬಂದವರು. ಅವರ ಬಗ್ಗೆ ನಾನು ಹೆಚ್ಚು ತಿಳಿದುಕೊಳ್ಳಬೇಕು. ಇದು ಸರಿಯೋ ತಪ್ಪೋ ನನಗೆ ಗೊತ್ತಿಲ್ಲ. ಆದರೆ ಅವಕಾಶ ಸಿಕ್ಕರೆ ಅವರ ಜತೆ ಡೇಟಿಂಗ್ ಮಾಡಲು ಬಯಸುವೆ’ ಎಂದಿದ್ದರು ಕರೀನಾ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ