‘ಸಂಜು’ ಸಿನಿಮಾದಲ್ಲಿ ತಮ್ಮ ಸೀನ್ ಗಳನ್ನು ಡಿಲೀಟ್ ಮಾಡಿ ಎನ್ನುತ್ತಿದ್ದಾರಂತೆ ಈ ನಟಿ

ಶುಕ್ರವಾರ, 22 ಜೂನ್ 2018 (14:03 IST)
ಮುಂಬೈ : ಬಾಲಿವುಡ್ ನಟ ಸಂಜಯ್ ದತ್ ಅವರ ಜೀವನಚರಿತ್ರೆ ಆಧಾರಿತ 'ಸಂಜು' ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಈ ನಡುವೆ ಇದೀಗ ಬಾಲಿವುಡ್ ನಟಿಯೊಬ್ಬರು ಚಿತ್ರದಲ್ಲಿ ಬರುವ ಕೆಲವು ಸೀನ್ ಗಳನ್ನು ಡಿಲೀಟ್ ಮಾಡುವಂತೆ ನಿರ್ದೇಶಕರಿಗೆ ಒತ್ತಾಯ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.


ಹೌದು. ನಟ ಸಂಜಯ್ ದತ್ ಹಾಗೂ ಮಾಧುರಿ ದೀಕ್ಷಿತ್ ನಡುವೆ ಅಫೇರ್ ಇತ್ತು ಎಂಬ ಸಂಗತಿ ಎಲ್ಲರಿಗೂ ತಿಳಿದಿತ್ತು. ಆದರೆ ತಮ್ಮ ಪ್ರೀತಿಯ ಬಗ್ಗೆ ಸಂಜಯ್ ದತ್ ಆಗಲಿ, ಮಾಧುರಿ ದೀಕ್ಷಿತ್ ಆಗಲಿ ಅಧಿಕೃತವಾಗಿ ಎಲ್ಲೂ  ಒಪ್ಪಿಕೊಂಡಿಲ್ಲ. ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಜಯ ದತ್ ಅರೆಸ್ಟ್ ಆದ್ಮೇಲೆ, ಇಬ್ಬರ ಪ್ರೀತಿ ಮುರಿದು ಬಿದ್ದಿತ್ತು.
ಆದರೆ ಈಗ ಸದ್ಯದಲ್ಲೇ ತೆರೆಗೆ ಬರಲು ರೆಡಿಯಾದ ‘ಸಂಜು’ ಸಿನಿಮಾದಲ್ಲಿ ತಮ್ಮ ಸೀನ್ ಗಳನ್ನು ಡಿಲೀಟ್ ಮಾಡಿ ಎಂದು ನಿರ್ದೇಶಕರಿಗೆ ನಟಿ ಮಾಧುರಿ ದೀಕ್ಷಿತ್ ಒತ್ತಾಯ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಕೇಳಿಬರುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ