ನಿಕ್ ಜೋನಸ್ ಸೋದರಸಂಬಂಧಿಯ ವಿವಾಹದಲ್ಲಿ ಹಾಜರಾದ ಪ್ರಿಯಾಂಕಾ

ಮಂಗಳವಾರ, 19 ಜೂನ್ 2018 (16:47 IST)
ಬಾಲಿವುಡ್ ನಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.

ಬಾಲಿವುಡ್‌ನಲ್ಲಿ ಮಿಂಚಿದ ಪ್ರಿಯಾಂಕಾ ಕಳೆದ ಕೆಲವು ದಿನಗಳಿಂದ ಹಾಲಿವುಡ್ ಗಾಯಕ ನಿಕ್ ಜೋನಸ್ ಜೊತೆ ಡೇಟ್ ಮಾಡುತ್ತಿರುವ ಸುದ್ದಿ ಹರಡುತ್ತಿದೆ.
 
ನಿಕ್ ಜೋನಸ್ ಜೊತೆಯಲ್ಲಿ ಒಡನಾಟ ಹೆಚ್ಚಿದ್ದು, ಇತ್ತೀಚೀನ ದಿನಗಳಲ್ಲಿ ಇಬ್ಬರೂ ಪಾರ್ಟಿ, ರೆಸ್ಟೊರೆಂಟ್‌ಗೆ ಒಟ್ಟಾಗಿ ತೆರಳಿರುವುದು ಗಾಸಿಪ್ ಹಬ್ಬಲು ಕಾರಣವಾಗಿದೆ.

ಇತ್ತೀಚಿನ ವರದಿಗಳ ಪ್ರಕಾರ, ಶನಿವಾರ ಅಟ್ಲಾಂಟಿಕ್ ಸಿಟಿ, ನ್ಯೂ ಜೆರ್ಸಿಯಲ್ಲಿ ನಟಿ ಪ್ರಿಯಾಂಕಾ ತನ್ನ ಗೆಳಯ ನಿಕ್ ಜೋನಸ್ ಅವರ ಸೋದರಸಂಬಂಧಿಯ ವಿವಾಹ ಸಮಾರಂಭಕ್ಕೆ ಭಾಗಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ