ಕನ್ನಡದ ಬಗ್ಗೆ ಅಭಿಮಾನ ತೋರಿದ ಈ ಬಾಲಿವುಡ್ ನಟ ಯಾರು ಗೊತ್ತಾ?

ಶುಕ್ರವಾರ, 6 ಜುಲೈ 2018 (06:51 IST)
ಮುಂಬೈ : ಎಲ್ಲರೂ ತುಂಬಾ ಇಷ್ಟ ಪಡುವ ಹಾಗೂ ಕಲಿಯಲು ತುಂಬಾ ಸುಲಭವಾದ ಭಾಷೆ ಎಂದರೆ ಅದು ಕನ್ನಡ. ವಿದೇಶದವರು ಕೂಡ ಕನ್ನಡದ ಮೇಲೆ ಒಲಿವು ತೋರಿ ಅದನ್ನು  ಕಲಿಯಲು ಮುಂದಾಗಿದ್ದಾರೆ. ಅದೇರೀತಿ ಇದೀಗ ಬಾಲಿವುಡ್ ನಟರೊಬ್ಬರು ಕನ್ನಡದ ಬಗ್ಗೆ  ಅಭಿಮಾನ ತೋರಿದ್ದಾರೆ.


ಅವರು ಬೇರೆ ಯಾರು ಅಲ್ಲ. ಕನ್ನಡತಿ ಪ್ರಣೀತಾ ಸುಭಾಷ್ ಅವರೊಂದಿಗೆ ಅಲ್ಬಂ ಸಾಂಗ್ ಒಂದರಲ್ಲಿ ನಟಿಸಿದ್ದ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ. ನಟ ಆಯುಷ್ಮಾನ್ ಖುರಾನಾ ಅವರು ಪ್ರಣೀತಾ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಕನ್ನಡದಲ್ಲೇ ಮಾತನಾಡಿ ‘ಕನ್ನಡ ಅಭಿಮಾನಿಗಳು ಎಂದರೇ ನನಗೆ ಇಷ್ಟ, ನಾನು ಒಳ್ಳೇ ಹುಡುಗ’ ಎಂದು ಹೇಳುವ ಮೂಲಕ  ತಮ್ಮ ಕನ್ನಡ ಪ್ರೇಮ ಮೆರೆದಿದ್ದಾರೆ. ಸದ್ಯ ಈ ವಿಡಿಯೋವನ್ನು ನಟಿ ಪ್ರಣೀತಾ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ಯಾರು ಕನ್ನಡ ಕಲಿಯುತ್ತಿದ್ದಾರೆ ನೋಡಿ ಎಂದು ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ