ಏಪ್ರಿಲ್ ಫೂಲ್ ಡೇ ಅಲ್ಲ, ಡೊನಾಲ್ಡ್ ಟ್ರಂಪ್ ಡೇ ಎಂದು ಮೂದಲಿಸಿದ ಆರ್ಜಿವಿ

ಶನಿವಾರ, 1 ಏಪ್ರಿಲ್ 2017 (16:06 IST)
ಸದಾ ಒಂದಲ್ಲ ಒಂದು ವಿವಾದದ ಮೂಲಕವೇ ಸುದ್ದಿಮಾಡುವ ಫಿಲ್ಮ್ ಮೇಕರ್ ರಾಮ್ ಗೋಪಾಲ್ ವರ್ಮಾ, ಈ ಬಾರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ.

ಹಾಯ್ ಡೊನಾಲ್ಡ್ ಟ್ರಂಪ್`ಗೆ ಮತ ಹಾಕಿದ ಎಲ್ಲ ಅಮೆರಿಕದ ಮೂರ್ಖ ಜನರಿಗೆ ನಾನಿವತ್ತು ಶುಭಾಶಯ. ತಿಳಿಸುತ್ತೇನೆ. ವೆರಿ ಹ್ಯಾಪಿ ಟ್ರಂಪ್ ಡೇ ಎಂದು ವರ್ಮಾ ಟ್ವಿಟ್ ಮಾಡಿದ್ದಾರೆ.

ವಿಶೇಷವೆಂದರೆ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದಾಗ ಇದೇ ರಾಮ್ ಗೋಪಾಲ್ ವರ್ಮಾ ಟ್ರಂಪ್ ಅವರನ್ನ ಬೆಂಬಲಿಸಿದ್ದರು. ನಾನು ನನಗೆ ಅಭಿನಂದನೆ ಸಲ್ಲಿಸಿಕೊಳ್ಳುತ್ತೇನೆ. 4 ತಿಂಗಳ ಮೊದಲೇ ಅವರ ಗೆಲುವನ್ನ ಊಹಿಸಿದ್ದೆ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದರು.


Hey I wish all you foolish Americans who voted for @realDonaldTrump a very very HAPPY TRUMP's DAY

ವೆಬ್ದುನಿಯಾವನ್ನು ಓದಿ