ಅಂದು ಗರುಡಗಮನ, ಇಂದು ಸು ಫ್ರಮ್ ಸೋ: ಸ್ಯಾಂಡಲ್ ವುಡ್ ಗೆ ರಾಜ್ ಬಿ ಶೆಟ್ಟಿ ಸಂಜೀವಿನಿ

Krishnaveni K

ಸೋಮವಾರ, 28 ಜುಲೈ 2025 (10:15 IST)
Photo Credit: X
ಬೆಂಗಳೂರು: ಸೋತಾಗಲೆಲ್ಲಾ ಚಿತ್ರರಂಗವನ್ನು ಮೇಲೆತ್ತಲು ಒಬ್ಬರು ಬರುತ್ತಾರೆ ಎನ್ನುತ್ತಾರಲ್ಲಾ ಅದು ಈಗ ರಾಜ್ ಬಿ ಶೆಟ್ಟಿ ರೂಪದಲ್ಲಿ ಕನ್ನಡ ಚಿತ್ರರಂಗಕ್ಕೆ ನಿಜವಾಗಿದೆ. ಅಂದು ಗರುಗಡಮನ ವೃಷಭ ವಾಹನ, ಇಂದು ಸು ಫ್ರಮ್ ಸೋ ಮೂಲಕ ಸ್ಯಾಂಡಲ್ ವುಡ್ ನ್ನೇ ಗೆಲ್ಲಿಸಿದ್ದಾರೆ.

2021 ರಲ್ಲಿ ಕನ್ನಡ ಚಿತರಂಗ ಗೆಲುವಿನ ಹುಡುಕಾಟದಲ್ಲಿತ್ತು. ಕೊರೋನಾ ನಡುವೆ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಒಂದು ಬ್ರೇಕ್ ಬೇಕಿತ್ತು. ಆಗ ರಾಜ್ ಬಿ ಶೆಟ್ಟಿ ಗರುಡಗಮನ ವೃಷಭ ವಾಹನ ಎನ್ನುವ ಸಿನಿಮಾ ಮೂಲಕ ಗೆಲುವಿಗೆ ಮುನ್ನುಡಿ ಬರೆದರು. ಆ ಬಳಿಕ ಚಾರ್ಲಿ 777, ಕಾಂತಾರ, ಕೆಜಿಎಫ್ ಎಂದು ಚಿತ್ರರಂಗಕ್ಕೆ ಸಾಲು ಸಾಲು ಗೆಲುವು ಸಿಕ್ಕಿತ್ತು. ಪರಭಾಷೆಯವರೂ ನಮ್ಮತ್ತ ತಿರುಗಿ ನೋಡುವಂತಾಯಿತು. ಆಗಿನ್ನೂರಾಜ್ ಬಿ ಶೆಟ್ಟಿ ಸ್ಟಾರ್ ಆಗಿರಲಿಲ್ಲ.

ಆದರೆ ಈ ಸಿನಿಮಾ ಬಳಿಕ ಅವರ ಲಕ್ ಬದಲಾಗಿದ್ದು ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೂ ಬೂಸ್ಟ್ ಸಿಕ್ಕಿತು. ಇದೀಗ ಮತ್ತೆ ಕನ್ನಡ ಚಿತ್ರರಂಗ ಗೆಲುವೊಂದನ್ನು ನಿರೀಕ್ಷಿಸಿತ್ತು. ಸ್ಟಾರ್ ಗಳ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗ ಸೊರಗಿ ಹೋಗಿತ್ತು. ಇದೀಗ ಕನ್ನಡ ಚಿತ್ರರಂಗವನ್ನು ಮತ್ತೆ ಪುಟಿದೇಳುವಂತೆ ಮಾಡಲು ರಾಜ್ ಬಿ ಶೆಟ್ಟಿಯೇ ಬರಬೇಕಾಯಿತು. ರಾಜ್ ಬಿ ಶೆಟ್ಟಿ ಸಿನಿಮಾ ನಿರ್ಮಿಸುವ ಮೂಲಕ ರಾಜ್  ಬಿ ಶೆಟ್ಟಿ ಕನ್ನಡ ಚಿತ್ರರಂಗವನ್ನೇ ಗೆಲ್ಲಿಸಿದ್ದಾರೆ. ಎಷ್ಟೆಂದರೆ ನಿನ್ನೆ ಭಾನುವಾರ ಬಹುತೇಕ ಚಿತ್ರಮಂದಿರಗಳ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಸಿಂಗಲ್ ಸ್ಕ್ರೀನ್, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಎಲ್ಲಿ ನೋಡಿದರೂ ಟಿಕೆಟ್ ಸೋಲ್ಡ್ ಔಟ್ ಆಗಿತ್ತು. ಎಷ್ಟೆಂದರೆ ಬೆಳಗಿನ ಶೋ ಕೂಡಾ ಹೌಸ್ ಫುಲ್ ಆಗಿತ್ತು. ಕೇವಲ 200 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಈಗ 700 ಸ್ಕ್ರೀನ್ ಗೆ ಏರಿಕೆಯಾಗಿರುವುದು ಈ ಸಿನಿಮಾಗಿರುವ ಬೇಡಿಕೆಗೆ ಸಾಕ್ಷಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ