ನ್ಯೂಯೂರ್ಕ್ ನಲ್ಲಿ ಯು ಟರ್ನ್ ಸಿನಿಮಾ ತಂಡ

ಮಂಗಳವಾರ, 10 ಮೇ 2016 (11:44 IST)
ಪವನ್ ಕುಮಾರ್ ಅವರ ಸಿನಿಮಾ ಅಂದ್ರೆ ಹಾಗೇನೇ. ಅದರಲ್ಲಿ ಏನಾದರೊಂದು ವಿಶೇಷತೆ ಇದ್ದೇ ಇರುತ್ತೆ. ಸದ್ಯ ಯೂಟರ್ನ್ ಸಿನಿಮಾವನ್ನು ನಿರ್ದೇಶಿಸುತ್ತಿರುವ ಪವನ್ ಸಿನಿಮಾದಲ್ಲಿ ಹೊಸ ಹೊಸ ಪ್ರಯತ್ನಗಳಿಗೆ ಕೈ ಹಾಕುತ್ತಲೇ ಇದ್ದಾರೆ. ಸದ್ಯ ಯೂಟರ್ನ್ ಸಿನಿಮಾ ತಂಡ ನ್ಯೂಯಾರ್ಕ್ ನಲ್ಲಿ ಬೀಡು ಬಿಟ್ಟಿದೆ.
ಅಂದ್ಹಾಗೆ ಪವನ್ ಕುಮಾರ್ ಅವರು ನ್ಯೂಯಾರ್ಕ್ ಗೆ ತೆರಳಿರೋದು ಸಿನಿಮಾದ ಶೂಟಿಂಗ್ ಗೆ ಇಲ್ಲ. ಸಿನಿಮಾದ ಪ್ರಿಮೀಯರ್ ಶೋಗಾಗಿ. ಮೊನ್ನೆ ಮೊನ್ನೆಯಷ್ಟೇ ಚಕ್ರವ್ಯೂಹ ಸಿನಿಮಾದ ಮೊದಲ ಶೋ ಆಸ್ಟ್ರೇಲಿಯಾದಲ್ಲಿ ಪ್ರದರ್ಶನಗೊಂಡಿತ್ತು. 
 
ಇದೀಗ ಪವನ್ ಅವರ ಯೂಟರ್ನ್ ಸಿನಿಮಾ ಕೂಡ ನ್ಯೂಯಾರ್ಕ್ ನಲ್ಲಿ ಪ್ರದರ್ಶನಗೊಳ್ಳಲಿದೆ.ಇನ್ನು ಈ ಹಿಂದೆ 'ಲೂಸಿಯಾ'ಗೆ ಸಿಕ್ಕಂತಹ ಪ್ರೋತ್ಸಾಹ ಮತ್ತು ಬೆಂಬಲ ಇದಕ್ಕೂ ಸಿಗುತ್ತದೆ ಅನ್ನೋ ಭರವಸೆ ಅವರಿಗಿದೆ. ನ್ಯೂಯಾರ್ಕ್‌ನಲ್ಲಿ ಎರಡು ಪ್ರೀಮಿಯರ್ ಶೋಗಳಿವೆ. 
 
ಅಲ್ಲಿನ ಕನ್ನಡಿಗರನ್ನು ಭೇಟಿಯಾಗಿ ಅವರ ಅನಿಸಿಕೆಗಳನ್ನೂ ತಿಳಿಯುವ ಕಾತರತೆ ಚಿತ್ರತಂಡಕ್ಕಿದೆ. ಅಷ್ಟೇ ಅಲ್ಲ, ಅಲ್ಲಿ 'ತಿಥಿ' ಚಿತ್ರದ ಬಗ್ಗೆ ಒಳ್ಳೇ ಮಾತುಗಳು ಕೇಳಿ ಬರುತ್ತಿರೋದು ಪವನ್ ಸಂತಸವನ್ನು ಇಮ್ಮಡಿಗೊಳಿಸಿದೆ.
 
ಇನ್ನು ಚಿತ್ರದ ಪ್ರೀಮಿಯರ್ ಶೋನಲ್ಲ ಪವನ್ ಕುಮಾರ್ ಅವರ ಜೊತೆ ಶ್ರದ್ಧಾ ಶ್ರೀನಾಥ್, ರಾಧಿಕಾ ಚೇತನ್ ಸೇರಿದಂತೆ ಚಿತ್ರತಂಡದ ಹಲವರು ಪಾಲ್ಗೊಳ್ಳಲಿದ್ದಾರೆ. ಸಿನಿಮಾಕ್ಕೆ ಅಲ್ಲಿನ ಜನರಿಂದ ಯಾವ ರೀತಿ ರೆಸ್ಪಾನ್ಸ್ ಬರುತ್ತೆ ಅನ್ನೋದು ಕನ್ನಡಿಗರಲ್ಲೂ ಸಾಕಷ್ಟು ಕುತೂಹಲಗಳನ್ನು ಹುಟ್ಟಿ ಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ