ತೆರೆ ಕಂಡ ಮೊದಲ ದಿನದಲ್ಲೇ ಸರಾಸರಿ ಗಳಿಕೆ ಕಂಡ ಚಿತ್ರ

ಶನಿವಾರ, 18 ಜೂನ್ 2016 (11:01 IST)
ರಿಲೀಸ್ ಆದ ಮೊದಲ ದಿನದಲ್ಲೇ ಉಡ್ತಾ ಪಂಜಾಬ್ ಚಿತ್ರ ಸರಾಸರಿ ಗಳಿಕೆ ಕಂಡಿದೆ... ನಿನ್ನೆ ಚಿತ್ರ ರಿಲೀಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರಕ್ಕೆ ಸಖತ್ ಆಗೇ ರೆಸ್ಪಾನ್ಸ್ ಸೀಗುತ್ತಿದೆ. ತೆರೆ ಕಂಡ ಮೊದಲ ದಿನದಲ್ಲೇ 8ರಿಂದ 9 ಕೋಟಿಯಷ್ಟು ಚಿತ್ರ ಬಾಕ್ಸ್ ಆಫೀಸ್‌ನ ಗಲ್ಲಾಪೆಟ್ಟಿಗೆಯಲ್ಲಿ ಗಳಿಕೆ ಕಾಣುವುದರ ಮೂಲಕ ಮುನ್ನುಗ್ಗುತ್ತಿದೆ. 

 
ಓಪನಿಂಗ್ ದಿನದಲ್ಲಿ ಸರಾಸರಿಯಷ್ಟು ಗಳಿಕೆ ಕಂಡಿದ್ದು, ಈ ಚಿತ್ರದ ಪ್ರಮುಖ ಆಲಿಯಾ ಭಟ್, ಶಾಹಿದ್ ಕಪೂರ್, ಕರೀನಾ ಕಪೂರ್ ಹಾಗೂ ದಿಲ್ಜಿತ್ ಅಭಿನಯದ ಉಡ್ತಾ ಪಂಜಾಬ್ ಚಿತ್ರ 2.000 ಸ್ಕ್ರೀನ್ ಮೇಲೆ ಚಿತ್ರ ತೆರೆ ಕಂಡಿದೆ.

ಜನ ಸಾಮಾನ್ಯರಿಗೆ ಅನುಕೂಲವಾಗಲೆಂದು ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಮೇಲೂ ಚಿತ್ರ ತೆರೆ ಕಂಡಿದ್ದು, ಯಾರು ಬೇಕಾದರೆ ಹೋಗಿ ಸಿನಿಮಾ ನೋಡಲು ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ