ಉಪೇಂದ್ರ -ಪ್ರೇಮಾಗೆ ಸಾಥ್ ನೀಡಲಿದ್ದಾರೆ ಹರ್ಷಿಕಾ ಪೂಣಚ್ಚ

ಮಂಗಳವಾರ, 19 ಜುಲೈ 2016 (11:48 IST)
ಉಪೇಂದ್ರ ಹಾಗೂ ಪ್ರೇಮಾ ಅಭಿನಯಿಸುತ್ತಿರುವ ಉಪೇಂದ್ರ ಮತ್ತೆ ಹುಟ್ಟಿ ಬಾ- ಇಂತಿ ಪ್ರೇಮ' ಚಿತ್ರ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿ ಹಾಕಿದೆ. ಉಪೇಂದ್ರ ಹಾಗೂ ಪ್ರೇಮಾ ಕೆಮಿಸ್ಟ್ರಿಯನ್ನು ಮತ್ತೊಮ್ಮೆ ತೆರೆ ಮೇಲೆ ಕಾಣೋದಕ್ಕೆ ಕೋಟ್ಯಂತರ ಸಿನಿ ರಸಿಕರು ಕಾತುರರಾಗಿದ್ದಾರೆ. ಹೀಗಿರುವಾಗಲೇ ಈ ಸಿನಿಮಾ ತಂಡಕ್ಕೆ ಹೊಸ ಅತಿಥಿಯೊಬ್ಬರು ಎಂಟ್ರಿ ಕೊಟ್ಟಿದ್ದಾರೆ.


ಉಪೇಂದ್ರ ಹಾಗೂ ಪ್ರೇಮಾ ಅವರ ಸಿನಿಮಾಕ್ಕೆ ಎಂಟ್ರಿ ಕೊಟ್ಟಿರೋದು ಇನ್ನೊಬ್ಬ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ.ಅಂದ್ಹಾಗೆ ತೆಲುಗಿನ ಸೊಗ್ಗಾಡೆ ಚಿನ್ನಿ ನಾಯನ ದ ರಿಮೇಕ್ ಆಗಿರೋ ಈ ಸಿನಿಮಾದಲ್ಲಿ ಉಪೇಂದ್ರ ಅವರು  ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಉಪೇಂದ್ರ ಒಂದು ಪಾತ್ರಕ್ಕೆ ಅನೇಕ ಸಖಿಯರಂತೆ. ಆ ಸಖಿಯರಲ್ಲಿ ಒಬ್ಬಳ ಪಾತ್ರವನ್ನು ಹರ್ಷಿಕಾ ಪೂಣಚ್ಚ ಮಾಡ್ತಿದ್ದಾರೆ.

ಇನ್ನು ಉಪೇಂದ್ರ ಅವರ ಜೊತೆ ಅಭಿನಯಿಸೋದಕ್ಕೆ ಅವಕಾಶ ಸಿಕ್ಕಿರೋದಕ್ಕೆ ಹರ್ಷಿಕಾ ಪೂಣಚ್ಚ ಅವರಂತೂ ಫುಲ್ ಖುಷಿಯಾಗಿದ್ದಾರೆ.ಇಬ್ಬರು ಕೂಡ ಪ್ರತಿಭಾವಂತರು ಅವರ ಜೊತೆ ಕೆಲಸ ಮಾಡೋದು ದೊಡ್ಡ ವಿಚಾರ ಅಂದಿದ್ದಾರೆ.
 
ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ನಾಯಕಿಯರಾಗಿ ಪ್ರೇಮಾ ಹಾಗೂ ಲೂಸಿಯಾ ಸಿನಿಮಾ ಖ್ಯಾತಿಯ ಶೃತಿ ಹರಿಹರನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

ಉಪೇಂದ್ರ ಹಾಗೂ ಪ್ರೇಮಾ ಬಹು ವರ್ಷಗಳ ನಂತರ ಜೊತೆಯಾಗಿ ಕಾಣಿಸಿಕೊಳ್ಳುತ್ತಿರೋದರಿಂದ ಸಿನಿಮಾ ಸಾಕಷ್ಟು ಕುತೂಹಲ ಹುಟ್ಟಿ ಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ