ವಿರಾಟ್ ಕೊಹ್ಲಿ ಜತೆ ನಟಿ ಊರ್ವಶಿ ರೌಟೇಲಾ ನೀಡಿದ ಪೋಸ್ ನೋಡಿದರೆ ಅನುಷ್ಕಾಗೆ ಸಿಟ್ಟು ಬರೋದು ಖಂಡಿತಾ!

ಬುಧವಾರ, 19 ಜೂನ್ 2019 (11:13 IST)
ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೆ ಅದೆಷ್ಟೋ ಬಾಲಿವುಡ್ ನಟ-ನಟಿಯರು ಹಾಜರಿದ್ದರು. ಅವರಲ್ಲಿ ನಟಿ ಊರ್ವಶಿ ರೌಟೇಲಾ ಕೂಡಾ ಒಬ್ಬರು.


ಆದರೆ ತಾನು ಮೈದಾನದಲ್ಲಿ ಪಂದ್ಯ ನೋಡುತ್ತಿದ್ದೇನೆ ಎಂದು ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯನ್ನು ತಬ್ಬಿಕೊಂಡಿರುವ ಊರ್ವಶಿ ಫೋಟೋ ನೋಡಿ ಇನ್ ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಕೊಹ್ಲಿಯ ಪ್ರತಿಮೆಯನ್ನು ತಬ್ಬಿಕೊಂಡಿದ್ದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ.

ನಿನ್ನನ್ನು ಈ ಅವತಾರದಲ್ಲಿ ಅನುಷ್ಕಾ ನೋಡಿದ್ರೆ ಅಷ್ಟೇ. ನಿನ್ನ ಜಾಗ ಹುಡುಕಿಕೊಂಡು ಬರ್ತಾಳೆ ಎಂದು ಟ್ರೋಲಿಗರು ಕಾಲೆಳೆದಿದ್ದಾರೆ. ಇನ್ನು ಕೆಲವರು ಏನು ಅನುಷ್ಕಾ-ವಿರಾಟ್ ಕೊಹ್ಲಿಗೆ ಡೈವೋರ್ಸ್ ಕೊಡಿಸುವ ಪ್ಲ್ಯಾನಾ ನಿನ್ನದು? ಎಂದಿದ್ದಾರೆ. ಅಂತೂ ಕೊಹ್ಲಿಯನ್ನು ಅನುಷ್ಕಾ ಅಲ್ಲದೆ ಬೇರೆ ಹುಡುಗಿಯರ ಜತೆಗೆ ಅಭಿಮಾನಿಗಳಿಗೆ ನೋಡೋದೂ ಇಷ್ಟವಾಗಲ್ಲ ಅಂದ ಹಾಗಾಯ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ