ಹಾಟ್ ನಟಿ ಅಮಲಾಪೌಲ್ ನಟನೆಯ ಆಡೈ ಚಿತ್ರದ ಟೀಸರ್ ಬಿಡುಗಡೆ

ಮಂಗಳವಾರ, 18 ಜೂನ್ 2019 (19:13 IST)
ತಮಿಳು ಚಿತ್ರರಂಗದ ಹಾಟ್ ನಟಿ ಅಮಲಾ ಪೌಲ್ ನಟಿಸಿರುವ ಆಡೈ ಚಿತ್ರದ ಟೀಸರ್ ಇಂದು ಇಂಟರ್‌ನೆಟ್‌ನಲ್ಲಿ ಬಿಡುಗಡೆ ಗೊಂಡಿದೆ. ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದ್ದು, ಕೆಲವೇ ದಿನಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಚಿತ್ರದ ಟೀಸರ್ ಬಿಡುಗಡೆಗೊಳಿಸಿತ್ತು ಚಿತ್ರದ ನಾಯಕಿಯಾಗಿರುವ ಅಮಲಾ ಪೌಲ್ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 
 
ಅಮಲಾ ಪೌಲ್ ಕೆಲವು ದಿನಗಳ ಹಿಂದೆಯೇ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಚಿತ್ರದ ಟೀಸರ್ ಬಿಡುಗಡೆಗೊಳಿಸಲಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿಕೆ ನೀಡಿದ್ದರು.
 
ಟೀಸರ್‌ಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಮತ್ತು ಅಮಲಾ ಪೌಲ್ ಅವರ ಅತ್ಯುತ್ತಮ ಅಭಿನಯವನ್ನು ಅನೇಕರು ಮೆಚ್ಚಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ