ಜಯಾ ಬಚ್ಚನ್ ಸರಳತೆ, ಪರಿಶುದ್ಧತೆಯ ಸಾಕಾರರೂಪ ಎಂದು ಹೇಳಿದ್ದಾರೆ ವಿದ್ಯಾ. 68 ವರ್ಷದ ಜಯಾ ಬಚ್ಚನ್ ಅವರ ಸರಳತೆ, ಪರಿಶುದ್ಧತೆ, ಹಾಗೂ ಪಾರದರ್ಶಕತೆ ನನಗೆ ಇಷ್ಟ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಬಾಲಿವುಡ್ ನಟಿ ವಿದ್ಯಾ ಬಾಲನ್ ಜಯಾ ಬಚ್ಚನ್ ಕುರಿತು ಪ್ರಶಂಸೆ ನೀಡಿದ್ದಾರೆ. ಜಯಾ ಬಚ್ಚನ್ ಅವರ ಅಭಿಮಾನ ಚಿತ್ರವನ್ನು 9 ಸಲ ವೀಕ್ಷಿಸಿದ್ದಾರಂತೆ ವಿದ್ಯಾ.. ಈ ಚಿತ್ರದಲ್ಲಿ ಜಯಾ ಬಿಳಿ ಬಣ್ಣದ ಸೀರೆಯಲ್ಲಿ ಅವರ ಸರಳತೆ, ಪರಿಶುದ್ಧತೆ, ಹಾಗೂ ಅವರ ಅಭಿನಯ ವಿದ್ಯಾಗೆ ಇಷ್ಟವಾಗಿದೆ ಎಂದು ವಿದ್ಯಾ ಟ್ವೀಟ್ ಮಾಡಿದ್ದಾರೆ.
ಅವರ ಚಿತ್ರಗಳು ನನ್ನ ಫೇವರಿಟ್ ಆಗಿದ್ದು, ಅವರ ಅಭಿಮಾನ್, ಆನಂದ ಹಾಗೂ ಗೋಲ್‌ಮಾಲ್ ಚಿತ್ರಗಳ ಬಗ್ಗೆ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಇನ್ನೂ ವಿದ್ಯಾ ಕಹಾನಿ-2 ಚಿತ್ರದಲ್ಲಿ ನಟಿಸುತ್ತಿದ್ದಾರೆ..