ಶಾರುಖ್ ಖಾನ್ ಗೆ ವಿಲನ್ ಆಗಲು ವಿಜಯ್ ಸೇತುಪತಿ ದುಬಾರಿ ಸಂಭಾವನೆ

ಮಂಗಳವಾರ, 18 ಜುಲೈ 2023 (09:21 IST)
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾದಲ್ಲಿ ವಿಲನ್ ಆಗಿ ಅಭಿನಯಿಸಲು ತಮಿಳು ನಟ ವಿಜಯ್ ಸೇತುಪತಿ ದುಬಾರಿ ಸಂಭಾವನೆ ಪಡೆದಿದ್ದಾರೆ.

ಅಟ್ಲೀ ನಿರ್ದೇಶನ ಜವಾನ್ ಸಿನಿಮಾ ಸೆಪ್ಟೆಂಬರ್ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಶಾರುಖ್ ಗೆ ನಾಯಕಿಯಾಗಿ ನಯನತಾರಾ ಮತ್ತು ವಿಲನ್ ಆಗಿ ವಿಜಯ್ ಸೇತುಪತಿ ಅಭಿನಯಿಸುತ್ತಿದ್ದಾರೆ.

ಬಾಲಿವುಡ್ ಸಿನಿಮಾದಲ್ಲಿ ವಿಜಯ್ ಸೇತುಪತಿ ಬರೋಬ್ಬರಿ 21 ಕೋಟಿ ರೂ. ಸಂಭಾವನೆ ನೀಡಲಾಗಿದೆ. ಈ ಪಾತ್ರಕ್ಕೆ ವಿಜಯ್ ಸೇತುಪತಿಯೇ ಬೇಕೆಂದು ಶಾರುಖ್ ಆಗ್ರಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ