ಜವಾನ್ ಪಾತ್ರ ಮಾಡಲು ಯಶ್ ಸಿನಿಮಾಗಳನ್ನೂ ನೋಡಿದ್ದಾರಂತೆ ಶಾರುಖ್ ಖಾನ್

ಗುರುವಾರ, 13 ಜುಲೈ 2023 (17:24 IST)
ಮುಂಬೈ: ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಪಾತ್ರದ ವೇಷ ಭೂಷಣ ಈಗ ಭಾರೀ ವೈರಲ್ ಆಗುತ್ತಿದೆ. ಈ ಪಾತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಶಾರುಖ್ ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ.

ಜವಾನ್ ನಲ್ಲಿ ಶಾರುಖ್ ಪಾತ್ರವನ್ನು ನೋಡಿದರೆ ದಕ್ಷಿಣ ಭಾರತ ಸಿನಿಮಾಗಳ ಅನೇಕ ಪಾತ್ರಗಳು ನೆನಪಾಗುತ್ತವೆ ಎಂಬ ಮಾತು ಕೇಳಿಬಂದಿತ್ತು. ಇದೀಗ ಶಾರುಖ್ ಟ್ವಿಟರ್ ನಲ್ಲಿ ಅಭಿಮಾನಿಗಳೊಂದಿಗಿನ ಪ್ರಶ್ನೋತ್ತರಾವಳಿಯಲ್ಲಿ ಈ ಬಗ್ಗೆ ಉತ್ತರಿಸಿದ್ದಾರೆ.

ಜವಾನ್ ನಲ್ಲಿ ನಿಮ್ಮ ಪಾತ್ರದ ತಯಾರಿಗೆ ಬೇರೆ ಸಿನಿಮಾಗಳನ್ನು ನೋಡಿದ್ದೀರಾ ಎಂದು ಅಭಿಮಾನಿಯೊಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಶಾರುಖ್, ‘ನಾನು ಅಟ್ಲೀಯವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ವಿಜಯ್ ಸರ್, ರಜಿನಿ ಸರ್, ಅಲ್ಲು ಅರ್ಜುನ್, ಯಶ್ ಮತ್ತು ಸಾಕಷ್ಟು ಜನರ ಸಿನಿಮಾಗಳನ್ನು ನೋಡಿ ಭಾಷೆಯ ಭಾವಾರ್ಥ ಅರಿಯಲು ಪ್ರಯತ್ನಿಸಿದ್ದೇನೆ. ಬಳಿಕ ನನ್ನ ಪಾತ್ರಕ್ಕೆ ತಯಾರಿ ನಡೆಸಿದ್ದೇನೆ’ ಎಂದಿದ್ದಾರೆ.

ಜವಾನ್ ಸಿನಿಮಾ ಸೆಪ್ಟೆಂಬರ್ 7 ರಂದು ರಿಲೀಸ್ ಆಗುತ್ತಿದೆ. ತಮಿಳು ನಿರ್ದೇಶಕ ಅಟ್ಲೀ ಜವಾನ್ ಗೆ ಆಕ್ಷನ್ ಕಟ್ ಹೇಳಿದ್ದು, ಸೌತ್ ಸುಂದರಿ ನಯನತಾರಾ ನಾಯಕಿಯಾಗಿ ಅಭಿನಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ