ನಿಕ್ ಜೊತೆ ಮದುವೆಯಾಗುವ ವಿಚಾರದ ಬಗ್ಗೆ ನಟಿ ಪ್ರಿಯಾಂಕ ಮಾಧ್ಯಮದ ಮುಂದೆ ಹೇಳಿದ್ದೇನು?
ಭಾನುವಾರ, 12 ಆಗಸ್ಟ್ 2018 (07:04 IST)
ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಅಮೇರಿಕಾದ ಸಿಂಗರ್ ನಿಕ್ ಜಾನ್ಸನ್ ಜೊತೆ ಎಂಗೇಜ್ ಆಗಿದ್ದು, ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿತ್ತು. ಈ ಬಗ್ಗೆ ಮೌನವಾಗಿದ್ದ ನಟಿ ಪ್ರಿಯಾಂಕ ಇದೀಗ ಮಾಧ್ಯಮದ ಮುಂದೆ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನವದೆಹಲಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಿಯಾಂಕ ಈ ಬಗ್ಗೆ ಮಾತನಾಡಿದ್ದು,’ನಾನು ಒಂದು ಹೆಣ್ಣು, ನನಗೆ ಅಂತ ಸ್ವಂತ ಜೀವನ, ಕುಟುಂಬವಿದೆ. ನನ್ನನ್ನೆ ವಿಚಾರವಾಗಿ ಮುಂದಿಟ್ಟುಕೊಂಡು ದಿನನಿತ್ಯ ಮಾಧ್ಯಮಗಳ ಅನವಶ್ಯಕ ಗಾಸಿಫ್ಗಳನ್ನು ಎಬ್ಬಿಸುತ್ತಿವೆ, ಆದರೂ ನನ್ನ ವೈಯಕ್ತಿಕ ಜೀವನ ಸಾರ್ವಜನಿಕ ಬಳಕೆಗಲ್ಲ ಎಂದು ಪ್ರಿಯಾಂಕ ಹೇಳಿದ್ದಾರೆ.
‘ನಾನು ಸಿನಿಮಾದಲ್ಲಿರುವುದರಿಂದ 90 ಭಾಗ ಜೀವನ ಸಾರ್ವಜನಿಕ ಬಳಕೆಗೆ ಸೀಮಿತವಾದರೂ ಉಳಿದ 10 ಭಾಗ ನನ್ನ ವೈಯಕ್ತಿಕ ಜೀವನಕ್ಕಾಗಿ, ನನ್ನ ಕುಟುಂಬಕ್ಕಾಗಿ, ನನ್ನ ಸ್ನೇಹತರಿಗಾಗಿ ಹಾಗೂ ನನ್ನ ವೈಯಕ್ತಿಕ ಸಂಬಂಧಗಳಿಗಾಗಿ ಮೀಸಲಿದೆ. ಅದು ನನ್ನ ವೈಯಕ್ತಿಕ ಜೀವನ, ಅದು ಯಾರಿಗೂ ಬೇಡವಾದ ವಿಚಾರ ಅಥವಾ ನಾನು ಅದನ್ನು ಯಾರಿಗೂ ವಿವರಿಸುವ ಅಗತ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ