ಬಂಟರ ಸಂಘದಿಂದ ನಟಿ ಐಶ್ವರ್ಯಾ ರೈ ಗೆ ದಕ್ಕಿದ ಗೌರವ ಏನು ಗೊತ್ತಾ…?

ಮಂಗಳವಾರ, 10 ಏಪ್ರಿಲ್ 2018 (06:43 IST)
ಪುಣೆ : ಬಾಲಿವುಡ್ ನಟಿ ಮಂಗಳೂರಿನ ಬೆಡಗಿ ಐಶ್ವರ್ಯ ರೈ ಬಚ್ಚನ್ ಅವರಿಗೆ ಸ್ಥಳೀಯ ಬಂಟರ ಸಂಘವು ಗೌರವೊಂದನ್ನು ನೀಡಿ ಸತ್ಕರಿಸಿದೆ.


ನಟಿ  ಐಶ್ವರ್ಯ ರೈ ಬಚ್ಚನ್ ಅವರು ಕರ್ನಾಟಕದ ಕರಾವಳಿ ಭಾಗದ ಬಂಟ ಸಮುದಾಯದ ಸದಸ್ಯೆಯಾಗಿದ್ದು, ಆಗಾಗ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರ ಜೊತೆ  ಸಂಘದ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಅದೇರೀತಿ ಈ ಬಾರಿ  ಶನಿವಾರ ಪುಣೆಯಲ್ಲಿ ನಡೆದ ಬಂಟರ ಸಂಘದ ಸಮಾರಂಭದಲ್ಲಿ ಭಾಗವಹಿಸಿದ್ದ ನಟಿ ಐಶ್ವರ್ಯ ರೈ ಬಚ್ಚನ್ ಅವರಿಗೆ ಬಂಟರ ಸಂಘವು 'ವುಮನ್‌ ಆಫ್‌ ಸಬ್‌ಸ್ಟೆನ್ಸ್‌' ಗೌರವ ನೀಡಿ ಸತ್ಕರಿಸಿದೆ. ಇದೇ ಸಂದರ್ಭದಲ್ಲಿ ಅವರು 'ಬಂಟರ ಭವನ'ವನ್ನೂ ಕೂಡ ಉದ್ಘಾಟಿಸಿದ್ದರು. ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹಾಗೂ ಬಂಟರ ಸಮುದಾಯದ ಗಣ್ಯರು ಕೂಡ ಪಾಲ್ಗೊಂಡಿದ್ದರು.  

 

ಬಾಲಿವುಡ್ ನ ಮತ್ತೊಬ್ಬ ನಟಿ ಮಂಗಳೂರಿನ ಮೂಲದ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ಕೂಡ ಬಂಟರ ಸಮುದಾಯದ ಇನ್ನೊಬ್ಬ ಸೆಲೆಬ್ರಿಟಿ ಸದಸ್ಯೆಯಾಗಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ