ಶ್ರೀದೇವಿ ಸಾವಿನ ಬಗ್ಗೆ ರಾಮಗೋಪಾಲ್ ವರ್ಮಾ ಹೇಳಿದ್ದೇನು?

ಸೋಮವಾರ, 26 ಫೆಬ್ರವರಿ 2018 (07:04 IST)
ಮುಂಬೈ : ದುಬೈನಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ  ಹೃದಯಾಘಾತದಿಂದಾದ ಸಾವನ್ನಪ್ಪಿದ ಶ್ರೀ ದೇವಿ ಸಾವು ಎಲ್ಲರಿಗೂ ಭರಿಸಲಾಗದ ನೋವು ತಂದಿದೆ.


ಇದೇ ವೇಳೆ ರಾಮ್ ಗೋಪಾಲ್ ವರ್ಮಾ ಶ್ರೀ ದೇವಿ ನಿಧನಕ್ಕೆ ಅತೀವ ದುಃಖವನ್ನು ತೋಡಿಕೊಂಡಿದ್ದಾರೆ. ನಿಜವಾಗಿಯೂ ಶ್ರೀ ದೇವಿ ಸತ್ತಿದ್ದಾಳೆಯೇ. ಯಾರಾದರು ನನ್ನನ್ನು ಎಚ್ಚರಿಸಿ ಇದೊಂದು ಕೆಟ್ಟ ಕನಸು ಎಂದು ಹೇಳಬಾರದೇ ಎಂದು ಅವರು ಹೇಳಿಕೊಂಡಿದ್ದಾರೆ.


ರಾತ್ರಿ ಎಚ್ಚರವಾದಾಗ ಕೆಲವರಿಗೆ ತಮ್ಮ ಫೋನ್ ನೋಡುವ ಅಭ್ಯಾಸವಿರುತ್ತದೆ. ಅದರಂತೆ ನನಗೂ ಕೂಡ ಅದೇ ರೀತಿಯಾದ ಅಭ್ಯಾಸವಿದ್ದು, ಈ ಸಂದೇಶವನ್ನು ನೋಡಿದೆ. ಆಗ ನನಗೆ ಅನಿಸಿದ್ದು,ಇದೊಂದು ಕೆಟ್ಟ ಕನಸೆಂದು.  ನಂತರ ಮತ್ತೆ ನಾನು ನಿದ್ದೆಗೆ ಜಾರಿದೆ. ಬಳಿಕ ನಾನು ಎಚ್ಚರವಾದಾಗ ಮತ್ತೆ ಮೊಬೈಲ್ ನೋಡಿದಾಗ ಸುಮಾರು 50 ಮಂದಿ ನನಗೆ ಈ ಬಗ್ಗೆ ಸಂದೇಶವನ್ನು ಕಳಿಸಿದ್ದರು ಎಂದು ಹೇಳಿದ್ದಾರೆ.


ಅಲ್ಲದೇ ಆಕೆಯನ್ನು ಕರೆದುಕೊಂಡು ಹೋದ ದೇವರನ್ನು ನಾನು ಧ್ವೇಷಿಸುತ್ತೇನೆ. ಇಷ್ಟು ಬೇಗ ಕರೆದೊಯ್ದ ಆಕೆಯ ಸಾವನ್ನು ಕೂಡ ದ್ವೇಷಿಸುತ್ತೇನೆ ಎಂದು ಬರೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ