ಅಮಿತಾಬ್ ಬಚ್ಚನ್‌ರನ್ನು ಭೇಟಿ ಮಾಡಿದ ಸನ್ನಿ

ಗುರುವಾರ, 28 ಏಪ್ರಿಲ್ 2016 (15:51 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ಹಲವು ನಟರ ಫ್ಯಾನ್ ಎಂಬುದು ನಿಮಗೆಲ್ಲ ಗೊತ್ತು. ಈಗ ಸನ್ನಿ ಲಿಯೋನ್ ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್‌ರನ್ನು ಭೇಟಿ ಮಾಡಿದ್ದಾರೆ. ಪಿಂಕ್ ಚಿತ್ರದ ಶೂಟಿಂಗ್‌ನಲ್ಲಿದ್ದ ಅಮಿತಾಬ್ ಅನರನ್ನು ಸನ್ನಿ ಭೇಟಿ ಮಾಡಿದ್ದಾಳಂತೆ.
ಪಿಂಕ್ ಚಿತ್ರದ ಶೂಟಿಂಗ್‌ನಲ್ಲಿದ್ದ ಅಮಿತಾಬ್ ಅನರನ್ನು ಸನ್ನಿ ಭೇಟಿ ಮಾಡಿದ್ದಾಳಂತೆ. ಅದಲ್ಲದೇ ಕಾಮಿಡಿ ನೈಟ್ಸ್ ಕಾರ್ಯಕ್ರಮದ ಶೂಟಿಂಗ್ ನಲ್ಲಿದ್ದಾಳೆ ಸನ್ನಿ. ಇತ್ತ ಅಮಿತಾಬ್ ಕೂಡ ಸೋಯಜಿತ್ ಮುಂದಿನ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಇದೇ ವೇಳೆ ಹಲವು ವಿಷಯಗಳ ಬಗ್ಗೆ ಚಾಟ್ ಮಾಡಿದ್ದಾರಂತೆ ಅಮಿತಾಬ್ ಬಚ್ಚನ್ ಹಾಗೂ ಸನ್ನಿ ಲಿಯೋನ್..
 
ಈ ಹಿಂದೆ ಸನ್ನಿ ಲಿಯೋನ್ ಅಮಿರ್ ಖಾನ್ ಅವರನ್ನು ಭೇಟಿ ಮಾಡಿದ್ದರು....ಅಲ್ಲದೇ ಅಮಿರ್ ಖಾನ್ ಕೂಡ ಅವಕಾಶ ಸಿಕ್ಕರೆ ಸನ್ನಿ ಜತೆ ನಟಿಸುವುದಾಗಿ ಹೇಳಿಕೆ ನೀಡಿದ್ದರು. 
 
ಅಲ್ಲದೇ ಸನ್ನಿ ಕಿಂಗ್ ಖಾನ್ ಜತೆಗೆ ರಾಯಿಸ್ ಚಿತ್ರದ ಶೂಟಿಂಗ್ ಮುಗಿಸಿದ್ದಳು, ಚಿತ್ರದ ನಿರ್ದೇಶಕ ರೈತೇಶ್ ಸಿದ್ಧವಾನಿ. ಚಿತ್ರದ ಓ ಲೈಲಾ ಓ ಲೈಲಾ ಹಾಡಿಗೆ ಹೆಜ್ಜೆ ಹಾಕಿದ್ದಾಳೆ, ಇನ್ನೂ ಸನ್ನಿ ಸಖತ್ತಾಗೆ ಸಾಂಗ್‌ನ್ನ ಎಂಜಾಯ್ ಮಾಡಿದ್ದರು.
 
ಇನ್ನೂ ಸನ್ನಿ ಕುರಬಾನಿ ಸಾಂಗ್‌ನಲ್ಲೂ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದ್ದಾರೆ ಸನ್ನಿ, ಕುರಬಾನಿ ಹಾಡಿನ ಮೆಂಟರ್ ಆಗಿರುವ ಪ್ರಶಾಂತ್ ಸಾವಂತ್‌ರಿಂದ ಸ್ಟೆಪ್‌ಗಳನ್ನು ಕಲಿತು. ರಾಯಿಸ್ ಚಿತ್ರದಲ್ಲಿ ಶಾರೂಖ್ ಖಾನ್ ಜೊತೆಗೆ  ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದಕ್ಕಾಗಿ ಟ್ರೈನಿಂಗ್ ಪಡೆದಿದ್ದರು ಸನ್ನಿ ಲಿಯೋನ್. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ