ದೀಪಿಕಾ- ರಣವೀರ್ ಮದುವೆಗೆ ಬರುವವರು ಇವುಗಳನ್ನು ತರಬಾರದಂತೆ
ಶುಕ್ರವಾರ, 17 ಆಗಸ್ಟ್ 2018 (06:59 IST)
ಮುಂಬೈ : ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ನವೆಂಬರ್ 2 ರಂದು ಇಟಲಿಯಲ್ಲಿ ಮದವೆಯಾಗುತ್ತಿರುವ ವಿಷಯ ಈಗಾಗಲೇ ಎಲ್ಲರಿಗೂ ತಿಳಿದಿದೆ. ಆದರೆ ತಮ್ಮ ಮದುವೆ ಸಮಾರಂಭಕ್ಕೆ ಬರುವವರಿಗೆ ಕಂಡಿಷನ್ ಒಂದನ್ನು ಹಾಕಿದ್ದಾರಂತೆ ದೀಪಿಕಾ ಪಡುಕೋಣೆ.
ಹೌದು. ದೀಪಿಕಾ- ರಣವೀರ್ ಇಟಲಿಯಲ್ಲಿ ನಡೆಯುವ ತಮ್ಮ ಮದುವೆಗೆ ಆಪ್ತರಿಗೆ ಮಾತ್ರ ಆಹ್ವಾನ ನೀಡಿದ್ದಾರಂತೆ. ಹಾಗೇ ಮದುವೆ ಸಮಾರಂಭಕ್ಕೆ ಬರುವವರಿಗೆ ಮೊಬೈಲ್, ಕ್ಯಾಮರಾ ತರದಂತೆ ಮನವಿ ಕೂಡ ಮಾಡಿದ್ದಾರಂತೆ.
ಅವರು ಈ ರೀತಿ ಕಂಡಿಷನ್ ಹಾಕಲು ಕಾರಣವಿದೆ. ಅದೇನೆಂದರೆ ಮದುವೆಗೆ ಬರುವ ಸಂಬಂಧಿಕರು ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕುವುದು ದೀಪಿಕಾಗೆ ಇಷ್ಟವಿಲ್ಲವಂತೆ. ತಮ್ಮ ಮದುವೆ ವಿಚಾರ ಹಾಗೂ ಫೋಟೋವನ್ನು ತಾವೇ ಅಭಿಮಾನಿಗಳಿಗೆ ತಿಳಿಸಲು ಬಯಸಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ