ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ ವಿವೇಕ್ ಅಗ್ನಿಹೋತ್ರಿ ಹಿನ್ನಲೆಯೇನು?

ಗುರುವಾರ, 17 ಮಾರ್ಚ್ 2022 (09:10 IST)
ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಎಂಬ ಸಿನಿಮಾ ನಿರ್ದೇಶಿಸಿ ದೇಶದಾದ್ಯಂತ ಸಂಚಲನ ಸೃಷ್ಟಿಸಿರುವ ನಿರ್ದೇಶಕ ವಿವೆಕ್ ಅಗ್ನಿಹೋತ್ರಿ ಹಿನ್ನಲೆಯೇನು ಗೊತ್ತಾ?

ಚಾಕಲೇಟ್ ಎನ್ನುವ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ವಿವೇಕ್ ಅಗ್ನಿಹೋತ್ರಿ ಬಣ್ಣದ ಲೋಕದ ನಂಟು ಬೆಳೆಸಿದ್ದು ಜಾಹೀರಾತು ಪ್ರಪಂಚದ ಮೂಲಕ. ಜಾಹೀರಾತುಗಳಿಗೆ ಕ್ರಿಯಾತ್ಮಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ವಿವೇಕ್ ಬಳಿಕ ಚಾಕಲೇಟ್ ಮೂಲಕ ಸಿನಿಮಾ ನಿರ್ದೇಶಕರಾದರು.

ಬಳಿಕ 2019 ರಲ್ಲಿ ಅವರು ನಿರ್ದೇಶಿಸಿದ್ದ ದಿ ತಾಷ್ಕೆಂಟ್ ಫೈಲ್ಸ್ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಸಮೂಹ ಸಂವಹನ ವಿಷಯದಲ್ಲಿ ಪದವಿ ಪಡೆದಿರುವ ಅವರು ಇದುವರೆಗೆ 8 ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಸೆನ್ಸಾರ್ ಮಂಡಳಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ರಾಧಿಕಾ ಪಾತ್ರ ಮಾಡಿರುವ ನಟಿ ಪಲ್ಲವಿ ಜೋಶಿ, ವಿವೇಕ್ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ