ಮುಂಬೈ : 2017 ರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರಲ್ಲಿ ಸ್ಥಾನ ಪಡೆದ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅವರು 2018 ರ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರ ಪಟ್ಟಿಯಿಂದ ಹೊರಬಿದ್ದಿದ್ದಾರಂತೆ.
ಹೌದು. ಹಾಲಿವುಡ್ ನ ‘ತ್ರಿಪಲ್ ಎಕ್ಸ್ ಕ್ಸೆಂಡರ್ ಕೇಜ್’ ಮತ್ತು ಬಾಲಿವುಡ್ ನ ‘ಪದ್ಮಾವತ್’ ಚಿತ್ರಗಳಿಗಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವುದರ ಮೂಲಕ 2017ರ ಪೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟಿಯರ ಪಟ್ಟಿಯಲ್ಲಿ ನಟಿ ದೀಪಿಕಾ ಕೂಡ ಒಬ್ಬರಾಗಿದ್ದರು.
ಆದರೆ ಈ ಬಾರಿ ಟಾಪ್ 10 ರಲ್ಲಿ ಸ್ಥಾನ ಪಡೆಯಲು ದೀಪಿಕಾ ವಿಫಲರಾಗಿದ್ದಾರೆ. ಈ ಮೂಲಕ ಸೂಪರ್ ಹಿಟ್ ಸಿನಿಮಾ ‘ಪದ್ಮಾವತ್’ ನಂತರ ಅವರ ಸ್ಟಾರ್ ವ್ಯಾಲೂ ಕಡಿಮೆಯಾಗಿದೆ ಎಂಬುದು ತಿಳಿಯುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ