ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮಗೊಳಿಸದ ಸಂಬಂಧ ಅವರ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಇದೀಗ ಅನಿರುದ್ಧ ಅವರು ದಿಢೀರನೇ ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ.
ರಾತ್ರೋರಾತ್ರಿ ವಿಷ್ಣುವರ್ಧನ್ ಅವರ ಸಮಾಧಿಯನ್ನು ನೆಲಸಮ ಮಾಡಿರುವುದು ಅವರ ಅಭಿಮಾನಿಗಳಿಗೆ ಭಾರೀ ನೋವುಂಟು ಮಾಡಿದೆ. ಈ ಹಿನ್ನೆಲೆ ಆ ಸ್ಥಳಕ್ಕೆ ಬಂದು ತಮ್ಮ ನೋವನ್ನು ತೋಡಿಕೊಳ್ಳುತ್ತಿದ್ದಾರೆ.
ಕೆಲ ನಟ ನಟಿಯರು ಕೂಡಾ ವಿಷ್ಣು ಸಮಾಧಿ ತೆರವು ಗೊಳಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ನಟಿ ಶ್ರುತಿ ಅವರು ಪ್ರತಿಕ್ರಿಯಿಸಿ, ನನ್ನ ಜಾಮೀನು ಆದರೂ ನೀಡುತ್ತಿದ್ದೆ. ದೇವರ ಕೋಣೆಯಲ್ಲಿ ಪೂಜಿಸುವ ವ್ಯಕ್ತಿಗೆ ಅಷ್ಟು ಮಾಡಲ್ವ. ಆ ಜಾಮೀನು ವಿವಾದ ಗೊತ್ತೇ ಇರಲಿಲ್ಲ ಎಂದು ನೋವು ವ್ಯಕ್ತಪಡಿಸಿದ್ದರು.
ಇಷ್ಟೇಲ್ಲ ಬೆಳವಣಿಗೆಯಾದರು ವಿಷ್ಣುವರ್ಧನ್ ಅವರ ಕುಟುಂಬ ಮಾತ್ರ ಪ್ರತಿಕ್ರಿಯಿಸಿರಲಿಲ್ಲ. ಇದೀಗ ದಿಢೀರನೇ ಸಂಜೆ ನಾಲ್ಕು ಗಂಟೆಗೆ ಅನಿರುದ್ಧ್ ಪತ್ರಿಕಾಗೋಷ್ಠಿಯನ್ನು ಕರೆದಿದ್ದು, ಭಾರೀ ಕುತೂಹಲವನ್ನು ಮೂಡಿಸಿದೆ.