ನಟಿ ದೀಪಿಕಾ ಪಡುಕೋಣೆಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ಹೇಳಿದ್ದು ಯಾಕಂತೆ…?
ಬುಧವಾರ, 7 ಮಾರ್ಚ್ 2018 (06:54 IST)
ಮುಂಬೈ: ನಟಿ ದೀಪಿಕಾ ಪಡುಕೋಣೆ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಪ್ರಸ್ತತ ಇರ್ಫಾನ್ ಖಾನ್ ಜೊತೆ ಅಭಿನಯಿಸಬೇಕಿರುವ ಹೊಸ ಚಿತ್ರದ ಚಿತ್ರೀಕರಣದಲ್ಲಿಯೂ ದೀಪಿಕಾ ಪಡುಕೋಣೆ ಭಾಗಿಯಾಗಿಲ್ಲ
ತಮ್ಮ ಮೆಚ್ಚಿನ ನಟಿಗೆ ಏನಾಗಿದೆ ಎಂದು ಅಭಿಮಾನಿಗಳಲ್ಲಿ ಆತಂಕವಾಗಿದೆ.
ನಟಿ ದೀಪಿಕಾ ದೀರ್ಘಕಾಲದ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ, ಚಿತ್ರೀಕರಣದಲ್ಲಿ ಭಾಗಿಯಾಗಲು ಕಷ್ಟವಾಗುತ್ತಿದೆಯಂತೆ ಅವರಿಗೆ. ಬೆನ್ನು ನೋವಿಗೆ ಚಿಕಿತ್ಸೆ ಪಡೆದುಕೊಂಡಿದ್ದು, ವೈದ್ಯರು 3-4 ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರಂತೆ.
ಕೆಲಸದಿಂದ ಒತ್ತಡ, ಜಾಹೀರಾತುಗಳಲ್ಲಿ ಬ್ಯುಸಿಯಾಗಿರುವುದರಿಂದ ದೀಪಿಕಾ ಪಡುಕೋಣೆಗೆ ಬೆನ್ನು ನೋವು ಕಾಣಿಸಿಕೊಂಡಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ