ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಅಭಿಮಾನಿಗಳ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ವಾರ್ನ್ ಮಾಡಿದ ರಶ್ಮಿಕಾ
ಗುರುವಾರ, 2 ಆಗಸ್ಟ್ 2018 (07:17 IST)
ಹೈದರಾಬಾದ್ : ಸ್ಯಾಂಡಲ್ ವುಡ್ ನ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಕಾರ್ಯಕ್ರಮಯೊಂದರಲ್ಲಿ ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ಅಭಿಮಾನಿಗಳಿಗೆ ಮುಖಕ್ಕೆ ಆ್ಯಸಿಡ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೌದು. ನಟಿ ರಶ್ಮಿಕಾ ಮಂದಣ್ಣ ಅವರು ಸ್ಯಾಂಡಲ್ ವುಡ್ ನಲ್ಲಿ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಕೂಡ ತಮ್ಮ ಟಾಲೆಂಟ್ ತೋರಿಸಲು ಹೊರಟಿದ್ದಾರೆ. ಇತ್ತೀಚೆಗೆಯಷ್ಟೇ ನಟಿ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರು ನಟಿಸಿದ 'ಗೀತಾ ಗೋವಿಂದಂ' ಚಿತ್ರದ ಆಡಿಯೋ ಬಿಡುಗಡೆಯಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಹಾಜರಾಗಿದ್ದರು.
ಆ ವೇಳೆ ಅಭಿಮಾನಿಗಳು ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ಅವರು ವೇದಿಕೆ ಮೇಲೆ ಬರಬೇಕೆಂದು ಕೂಗಲು ಪ್ರಾರಂಭಿಸಿದ್ದರು. ಆಗ ವೇದಿಕೆ ಏರಿ ಮೈಕ್ ಹಿಡಿದು ಮಾತು ಪ್ರಾರಂಭಿಸಿದ ನಟಿ ರಶ್ಮಿಕಾ, ‘ನನಗೆ ಗೊತ್ತು ನೀವು ಅಲ್ಲು ಸರ್ ವೇದಿಕೆ ಮೇಲೆ ಬರಬೇಕೆಂದು ಇಚ್ಚಿಸುತ್ತಿದ್ದೀರಿ. ಆದರೆ ಇದಕ್ಕೂ ಮುನ್ನ ಎರಡು ನಿಮಿಷ ನಾನು ಮಾತನಾಡುತ್ತೇನೆ. ಒಂದು ವೇಳೆ ನೀವು ಹೀಗೆ ಕಿರುಚಾಡಿದರೆ ಆ್ಯಸಿಡ್ ತಂದು ನಿಮ್ಮ ಮುಖದ ಮೇಲೆ ಹಾಕುತ್ತೇನೆ, ಮೊದಲು ನನಗೆ ಮಾತಾಡೋಕೆ ಬಿಡಿ ಎಂದು ವಾರ್ನಿಂಗ್ ಮಾಡಿದ್ದಾರೆ. ಆದರೆ ನಟಿ ರಶ್ಮಿಕಾ ಈ ರೀತಿಯಾಗಿ ಹೇಳಿದ್ದು ಸೀರಿಯಸ್ ಆಗಿ ಅಲ್ಲ, ಸುಮ್ನೆ ತಮಾಷೆಗಾಗಿ ಅಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ