‘ಸಂಜು' ಸಿನಿಮಾದ ಬಗ್ಗೆ ಆರ್​ಎಸ್​ಎಸ್ ಬೇಸರಗೊಂಡಿದ್ಯಾಕೆ?

ಶುಕ್ರವಾರ, 13 ಜುಲೈ 2018 (07:32 IST)
ಮುಂಬೈ : ನಟ ಸಂಜಯ್​ ದತ್​ ಅವರ ಜೀವನಾಧಾರಿತ ಸಿನಿಮಾ 'ಸಂಜು' ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಇದೀಗ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್​) ಈ ಸಿನಿಮಾದ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದೆ.


ಈ ವಿಚಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯ ಪತ್ರಿಕೆ ಪಾಂಚಜನ್ಯದಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಬರೆದಿರುವುದನ್ನು ನೋಡಿದಾಗ ಸ್ಪಷ್ಟವಾಗಿ ಅರ್ಥವಾಗುತ್ತದೆ. ಏಕೆಂದರೆ ಪತ್ರಿಕೆಯ ಮುಖಪುಟದಲ್ಲಿ 'ಕಿರ್​ದಾರ್​ ದಾಗ್​ದಾರ್​' ಎಂಬ ತಲೆ ಬಹರ ನೀಡಿರುವ ಈ ಲೇಖನದಲ್ಲಿ ಮುಂಬೈನ ಸಿನಿಮಾ ಉದ್ಯಮದ ಮಾಫಿಯಾ ಹಾಗೂ ಭೂಗತಲೋಕವನ್ನು ಎತ್ತಿಹಿಡಿಯುವ ಸಿನಿಮಾಗಳನ್ನು ಮಾಡಲು ಯಾಕೆ ಅವಕಾಶ ಮಾಡಿಕೊಡುತ್ತಾರೆ ಎಂದು ಬರೆದಿದ್ದಾರೆ.


‘ಈ ಸಿನಿಮಾದಲ್ಲಿ 1993 ಮುಂಬೈ ಬಾಂಬ್​ ಸ್ಫೋಟದಲ್ಲಿ ಜೈಲಿಗೆ ಹೋಗಿದ್ದ ಸಂಜಯ್​ ದತ್​ ಬಗ್ಗೆ ತುಂಬಾ ಒಳ್ಳೆಯ ಭಾವನೆ ಮೂಡುವಂತೆ ತೋರಿಸಲಾಗಿದೆ. ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಹಿಂದೂ ವಿರೋಧಿ ಸಿನಿಮಾಗಳನ್ನು ತೆಗೆಯುತ್ತಾರೆ. ಅವರ ಹಿಂದಿನ 'ಪಿಕೆ' ಸಿನಿಮಾ ಸಹ ಹಿಂದೂ ವಿರೋಧಿಯಾಗಿತ್ತು. ಇದರಲ್ಲಿ ಕಂಳಂಕಿತರಾಗಿರುವ ಸಂಜಯ್​ ದತ್​ ಅವರ ಹೆಸರನ್ನು ಶುದ್ಧಗೊಳಿಸುವ ಪ್ರಯತ್ನ ಮಾಡಲಾಗಿದೆ ವಿನಃ ಸಂಜು ಅವರ ಸಾಕಷ್ಟು ತಪ್ಪು ಮತ್ತು ಕೆಟ್ಟ ಗುಣಗಳನ್ನು ಮರೆಮಾಚಲಾಗಿದೆ. ಸಂಜಯ್​ ದತ್​ ಯಾವ ಘನ ಕಾರ್ಯ ಮಾಡಿದ್ದಾರೆಂದು ಅವರ ಜೀವನಾಧಾರಿತ ಸಿನಿಮಾ ಮಾಡಲಾಗಿದೆ. ಹಿರಾನಿ ಈ ಸಿನಿಮಾದ ಮೂಲಕ ಯುವಜನರಿಗೆ ಒಬ್ಬ ರೋಲ್​ ಮಾಡೆಲ್​ ಅನ್ನು ಪರಿಚಯಿಸಿದ್ದಾರಾ’ ಎಂದು ಬರೆಯುವುದರ ಮೂಲಕ ಬೇಸರವನ್ನು ಹೊರಹಾಕಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ