ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ನಟಿ ಕಂಗನಾ ರನಾವತ್?

ಭಾನುವಾರ, 25 ಸೆಪ್ಟಂಬರ್ 2022 (09:31 IST)
ಮುಂಬೈ: ಇಷ್ಟು ದಿನ ಕಾಂಗ್ರೆಸ್ ಮತ್ತು ಎಡಪಂಥೀಯರ ವಿರುದ್ಧ ಹೇಳಿಕೆಗಳಿಂದಲೇ ವಿವಾದಕ್ಕೊಳಗಾಗುತ್ತಿದ್ದ ನಟಿ ಕಂಗನಾ ರನಾವತ್ ಈಗ ರಾಜಕೀಯಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಕಂಗನಾ ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತಾರೆ, ಸದ್ಯಕ್ಕೆ ಹೇಮಮಾಲಿನಿ ಪ್ರತಿನಿಧಿಸುತ್ತಿರುವ ಮಥುರಾ ಕ್ಷೇತ್ರದಿಂದ ಕಂಗನಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿತ್ತು.

ಈ ಬಗ್ಗೆ ಸ್ವತಃ ಹೇಮಮಾಲಿನಿ ಪ್ರತಿಕ್ರಿಯಿಸಿದ್ದು, ಬಹುಶಃ ಮಥುರಾ ಕ್ಷೇತ್ರಕ್ಕೆ ಸಿನಿಮಾ ಕ್ಷೇತ್ರದವರೇ ಆಗಬೇಕೇನೋ. ಹಾಗಿದ್ದಲ್ಲಿ ಕಂಗನಾ ಇಲ್ಲಿಂದಲೇ ಸ್ಪರ್ಧಿಸಬಹುದು. ಬಹುಶಃ ಮುಂದೆ ರಾಖಿ ಸಾವಂತ್ ಕೂಡಾ ಇಲ್ಲಿಂದ ಸ್ಪರ್ಧಿಸಬಹುದು ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ