ಪತ್ನಿ ಅನುಷ್ಕಾ ಗೆಳತಿಗೆ ಸರ್ಪೈಸ್ ಕೊಟ್ಟ ವಿರಾಟ್ ಕೊಹ್ಲಿ

ಶುಕ್ರವಾರ, 16 ಸೆಪ್ಟಂಬರ್ 2022 (14:17 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಛಕ್ದಾ ಎಕ್ಸ್ ಪ್ರೆಸ್’ ಸಿನಿಮಾದಲ್ಲಿ ನಟಿಸುವ ಸಹ ನಟಿಗೆ ಸರ್ಪೈಸ್ ಕೊಟ್ಟಿದ್ದಾರೆ.

ಅನುಷ್ಕಾ ನಾಯಕಿಯಾಗಿರುವ ಛಕ್ದಾ ಎಕ್ಸ್ ಪ್ರೆಸ್ ಶೂಟಿಂಗ್ ಹಂತದಲ್ಲಿದ್ದು, ಸಿನಿಮಾದಲ್ಲಿ ಪಾತ್ರ ಮಾಡುತ್ತಿರುವ ನಟಿ ಅಂಶುಲಾ ಚೌಹಾನ್ ಗೆ ಕೊಹ್ಲಿ ಕಡೆಯಿಂದ ಹುಟ್ಟುಹಬ್ಬದ ನಿಮಿತ್ತ ಸರ್ಪೈಸ್ ಸಿಕ್ಕಿದೆ.

ಅಂಶುಲಾ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದು, ಆಕೆಯ ಹುಟ್ಟುಹಬ್ಬದಂದೇ ಅನುಷ್ಕಾ ಕೊಹ್ಲಿಯನ್ನು ಭೇಟಿ ಮಾಡಿಸಿದ್ದಾರೆ. ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅಂಶುಲಾ ಇದು ನನ್ನ ಕನಸು ನನಸಾದ ಗಳಿಗೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ