ಪ್ರಿಯಾಂಕ ಚೋಪ್ರಾ ಸಂಭಾವನೆ ಕೇಳಿದ್ರೆ ದಂಗಾಗುತ್ತೀರಿ

ಮಂಗಳವಾರ, 5 ಡಿಸೆಂಬರ್ 2023 (11:27 IST)
ಬಾಲಿವುಡ್‌ನಲ್ಲಿ ಒಂದು ಬಾರಿ ಜನಪ್ರಿಯತೆ ಪಡೆದರೆ ಸಾಕು. ಕೋಟಿ ಕೋಟಿ ರೂಪಾಯಿಗಳ ಸಂಭಾವನೆ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಇನ್ನೂ ಹಾಟ್ ನಟಿಯರ ಸಂಭಾವನೆ ಬಗ್ಗೆಯಂತೂ ಹೇಳಲು ಸಾಧ್ಯವಿಲ್ಲ. ಅವರು ಪ್ರತಿಯೊಂದು ನಿಮಿಷಕ್ಕೆ ಪಡೆಯುವ ಸಂಭಾವನೆ ಕೇಳಿದ್ರೆ ದಂಗಾಗುತ್ತೀರಿ.
 
ಕೇವಲ ಏಳೇ ಏಳು ನಿಮಿಷದಲ್ಲಿ ಕಾಣಿಸಿಕೊಳ್ಳುವುದಕ್ಕೆಂದು ಪ್ರಿಯಾಂಕ ಚೋಪ್ರ ಕೇಳಿರುವ ಸಂಭಾವನೆ ಮೊತ್ತ ಇಡೀ ಬಾಲಿವುಡ್ ಮಂದಿಯನ್ನೆ ನಡುಗಿಸಿದೆ! ಈಗ ಪಿಂಕಿ ಬಗ್ಗೆ ಕ್ರೇಜ್ ಜಾಸ್ತಿ ಇದೆ ಅಭಿಮಾನಿಗಳಿಗೆ. ಈಕೆಯ ಬಗ್ಗೆ ಇಟ್ಟಿರುವ ಅಭಿಮಾನದಿಂದ ತಾವು ಬದುಕಬಹುದು ಎಂದು ಜಾಹೀರಾತು ಕಂಪನಿಗಳು ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
 
ಇಂತಹ ಯೋಜನೆಗೆ ಭಾರಿ ಮೊತ್ತ ತೆರಬೇಕಾಗಿದೆ ಈಗ! ಹೊಸ ವರ್ಷದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕೇವಲ ಏಳು ನಿಮಿಷಗಳಲ್ಲಿ ಆಕೆ ಕಾಣ ಸಿಗುವುದಕ್ಕೆಂದು ಪ್ರಿಯಾಂಕ ತೆಗೆದುಕೊಳ್ಳುತ್ತಿರುವ ಹಣದ ಮೊತ್ತ ಆರು ಕೋಟಿ ರೂಪಾಯಿಗಳು.

ಇದ್ಯಾಕೋ ಜಾಸ್ತಿ ಆಯ್ತಲ್ವ ಎಂದು ದುಡ್ಡು ಕೊಡುವವರಿಗೆ ಅನ್ನಿಸಿದರೂ, ಈಗ ಪ್ರಿಯಾಂಕ ಟ್ರೆಂಡ್ ಇರುವುದರಿಂದ ಕೊಟ್ಟರೂ ಅದಕ್ಕಿಂತ ಹೆಚ್ಚು ಲಾಭ ಪಡೆಯ ಬಹುದು ಎಂದು ನಿರ್ಧರಿಸಿ ಆಕೆ ಕೇಳಿದಷ್ಟು ಮೊತ್ತವನ್ನು ಕೊಟ್ಟಿದ್ದಾರಂತೆ. ಅದನ್ನು ಟಿಕೆಟ್ ಮೂಲಕ ಹಿಂತಿರುಗಿ ಪಡೆಯುವ ಪ್ಲಾನ್ ಮಾಡಿದ್ದಾರೆ ಅವರು!

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ