200 ಕೋಟಿ ಗಳಿಕೆ ಮಾಡಿದ ಅನಿಮಲ್

ಸೋಮವಾರ, 4 ಡಿಸೆಂಬರ್ 2023 (11:20 IST)
ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿಮಲ್ ಸಿನಿಮಾ ವೀಕೆಂಡ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ.

ಡಿಸೆಂಬರ್ 1 ರಂದು ಬಿಡುಗಡೆಯಾಗಿದ್ದ ಅನಿಮಲ್ ಸಿನಿಮಾ ಇದೀಗ ಮೂರು ದಿನಗಳಲ್ಲಿ 200 ಕೋಟಿ ರೂ. ಗಳಿಕೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೊದಲ ದಿನವೇ ಸಿನಿಮಾ 61 ಕೋಟಿ ರೂ. ಗಳಿಸಿತ್ತು.

ಇದೀಗ ನಿನ್ನೆ ಮತ್ತು ಮೊನ್ನೆ ರಜಾ ದಿನವಾಗಿದ್ದರಿಂದ ಥಿಯೇಟರ್ ಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಇದರಿಂದಾಗಿ ಮೂರೇ ದಿನಕ್ಕೆ ಸಿನಿಮಾ 200 ಕೋಟಿ ಗಳಿಕೆ ಮಾಡಿದೆ.

ಸಂದೀಪ್ ವಂಗಾ ನಿರ್ದೇಶನದ ಸಿನಿಮಾ ಕೊಂಚ ಸುದೀರ್ಘವಾಗಿದ್ದರೂ ಬಾಕ್ಸ್ ಆಫೀಸ್ ಗಳಿಕೆಯ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಣಬೀರ್ ಜೊತೆಗೆ ರಶ್ಮಿಕಾ ಈ ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮೈನವಿರೇಳಿಸುವ ಸಾಹಸ ದೃಶ್ಯಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ