ಅತ್ಯಧಿಕ ಸಂಬಳ ಪಡೆದ ವಿದ್ಯಾರ್ಥಿನಿ? ಎಷ್ಟು ಗೊತ್ತಾ?

ಸೋಮವಾರ, 4 ಡಿಸೆಂಬರ್ 2023 (12:20 IST)
ವಿಶ್ವದ ಸಾಫ್ಟ್‌ವೇರ್ ಉದ್ಯಮ ಇಂದು ಯುವಕರಿಗೆ ವರದಾನವಾಗಿದೆ. ಕೇವಲ ಕೆಲ ಸಾವಿರಗಳಲ್ಲಿ ಸಂಬಂಳ ಪಡೆಯುತ್ತಿದ್ದವರಿಗೆ ಇಂದಿನ ವೇತನ ಯುಗದಲ್ಲಿ ಜಾಗತಿಕ ಬದಲಾವಣೆ ಕಂಡು ಗಾಬರಿಯಾಗಿದ್ದಾರೆ. ಕನಸು ಮನಸಲ್ಲು ಎಣಿಸದ ಸಂಬಳ ಇದೀಗ ಯುವಕರು ಕಾಲೇಜು ಶಿಕ್ಷಣ ಮುಗಿದ ಕೂಡಲೇ ಪಡೆಯುತ್ತಿದ್ದಾರೆ. 
 
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾನ್ಪುರದ ಇಬ್ಬರು ವಿದ್ಯಾರ್ಥಿಗಳು ಪ್ರಸಕ್ತ ಪ್ಲೇಸ್‌ಮೆಂಟ್‌ನಲ್ಲಿ ಬರೋಬ್ಬರಿ ತಲಾ 1.20 ಕೋಟಿ ಪ್ಯಾಕೇಜ್ ಪಡೆದಿದ್ದಾರೆ. ಇಬ್ಬರು ವಿದ್ಯಾರ್ಥಿಗಳು ವಾರ್ಷಿಕ 1.20 ಕೋಟಿ ಅತ್ಯಧಿಕ ಪ್ಯಾಕೇಜ್‌ಅನ್ನು ಐಟಿ ದೈತ್ಯ ಒರಾಕಲ್ ಕಂಪನಿಯಿಂದ ಪಡೆದರು. ಇನ್ನೂ 76 ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಿಂದ ವಾರ್ಷಿಕ 8 ಲಕ್ಷದಿಂದ 24 ಲಕ್ಷ ರೂ. ಪ್ಯಾಕೇಜ್ ಗಳಿಸಿದ್ದಾರೆ.
 
ಸುಮಾರು 50 ಕಂಪೆನಿಗಳು ಪ್ಲೇಸ್‌ಮೆಂಟ್ ಪ್ರಕ್ರಿಯೆಯಲ್ಲಿ ಈಗಾಗಲೇ ಭಾಗವಹಿಸಿದ್ದರು. ಗೂಗಲ್, ಒರಾಕಲ್, ಮಿಟ್ಸುಬಿಷಿ, ಅಮೆಜಾನ್, ಸಿಟಿ ಬ್ಯಾಂಕ್ ಮತ್ತು ಮೈಕ್ರೋಸಾಫ್ಟ್ ಸಂದರ್ಶನಗಳನ್ನು ನಡೆಸಿ 76 ವಿದ್ಯಾರ್ಥಿಗಳಿಗೆ ಆಫರ್ ಲೆಟರ್‌ಗಳನ್ನು ನೀಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ