'ನಾನು ಬಾಲಿವುಡ್‌ನಲ್ಲಿ ನಟಿಯಾಗಲು ಸಲ್ಮಾನ್ ಕಾರಣ' - ಜರೀನಾ ಖಾನ್

ಶನಿವಾರ, 28 ಮೇ 2016 (15:14 IST)
ಬಾಲಿವುಡ್ ನಟಿ ಜರೀನಾ ಖಾನ್ ತಮ್ಮ ಕೆರಿಯರ್ ಬಗ್ಗೆ ಹೇಳಿಕೊಂಡಿದ್ದಾರೆ.. ನಾನು ಬಾಲಿವುಡ್‌ನಲ್ಲಿ ಇರಲು ಅದು ಸಲ್ಮಾನ್ ಖಾನ್ ಕಾರಣ ಎಂದು ಹೇಳಿದ್ದಾರೆ. 2010ರಲ್ಲಿ ತೆರೆಕಂಡ ವೀರ್ ಸೇ ಚಿತ್ರದ ಮೂಲಕ  ಜರೀನಾ ರಾಜಕುಮಾರಿ ಯಶೋದಾ ಪಾತ್ರದಲ್ಲಿ ಮಿಂಚಿದ್ದರು


ಅದಾದ ಬಳಿಕ ಸಲ್ಮಾನ್ ಖಾನ್ ಜತೆಗೆ ರೆಡಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದ  ಜರೀನಾ ಖಾನ್ ಆ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಮಿಂಚಿದ್ದರು... ಅದೆಲ್ಲ ಯಶಸ್ಸು ಸಲ್ಮಾನ್‌ಗೆ ಸಿಗಬೇಕು ಎನ್ನುವ ಜರೀನಾಗೆ, ಅವರಿಲ್ಲದೇ ಹೋಗಿದ್ದರೆ, ನಾನು ಎಂದಿಗೂ ಅಭಿನೇತ್ರಿ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.
 
ಈ ಹಿಂದೆ ತೂಕ ಕಡಿಮೆ ಮಾಡುವ ಮಾತ್ರಗಳ ಬಂದಿದ್ದ ಆಫರ್‌ನ್ನು ಜರೀನಾ ನಿರಾಕರಿಸಿದ್ದರು.  ಹಾಗಾಗಿ ಜರೀನಾ ಅಂಥ ವಸ್ತುಗಳನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಯಾಕೆಂದ್ರೆ ಜರೀನಾಗೆ ಮಾತ್ರೆಗಳ ಬಗ್ಗೆ ನಂಬಿಕೆ ಇಲ್ವಂತೆ.
 
ಇನ್ನೂ ತೂಕ ಇಳಿಸುವುದರ ಕುರಿತು 1 ಕೋಟಿಯ ಆಫರ್ ಬಂದಿತಂತೆ. ಆದ್ರೆ ಜರೀನಾ ಮಾತ್ರ ಇದನ್ನು ನಿರಾಕರಿಸಿದ್ದರಂತೆ. 
 
ನೀವೂ ತೂಕ ಇಳಿಸಬೇಕಂದ್ರೆ ಹೆಚ್ಚು ಶ್ರಮಪಡಿ ಇದ್ದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು ಎಂದು ಜರೀನಾ ಸಲಹೆ ನೀಡಿದ್ದರು. ಬಾಲಿವುಡ್‌ನಲ್ಲಿ ವೀರ್ ಚಿತ್ರದಿಂದ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ