ನವದೆಹಲಿ: ನೋಟು ನಿಷೇಧ ಸೇರಿದಂತೆ ಪ್ರಧಾನಿ ಮೋದಿ ಸರ್ಕಾರದ ಹೊಸ ಹೊಸ ಆರ್ಥಿಕ ಆವಿಷ್ಕಾರದ ಫಲಿತಾಂಶ ಈ ಬಾರಿ ಮಂಡನೆಯಾಗುವ ಬಜೆಟ್ ನಲ್ಲಿ ತಿಳಿಯಲಿದೆ.
ಆರ್ಥಿಕ ಸಮೀಕ್ಷೆ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಆದಾಯ ಸಂಗ್ರಹಣೆಯಲ್ಲಿ ಹೆಚ್ಚಳವಾಗಿದೆ ಎಂದಿದ್ದಾರೆ. 2018 ರಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇ. 6.75 ರಷ್ಟಾಗಲಿದೆ ಎಂದು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 2020 ರ ವೇಳೆಗೆ ಇದು ಶೇ. 7.2 ದಾಟಬಹುದು ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ನೋಟು ನಿಷೇಧದ ಬಗ್ಗೆ ಸದಾ ಟೀಕಿಸುವ ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಸರ್ಕಾರ ಸಿದ್ಧವಾಗಿದೆ. ಒಟ್ಟಾರೆ ಈ ಸಾಲಿನಲ್ಲಿ ಅಭಿವೃದ್ಧಿ ಹೆಚ್ಚಳವಾಗಲಿದೆ ಎಂದ ನಿರೀಕ್ಷಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ