ಎಟಿಎಂಗಳಲ್ಲಿ ನಕಲಿ ನೋಟು ಬಂದರೆ ಗಾಬರಿ ಬೇಡ.. ಈ ಟಿಪ್ಸ್ ಫಾಲೋ ಮಾಡಿ

ಗುರುವಾರ, 23 ಫೆಬ್ರವರಿ 2017 (17:00 IST)
ನೋಟ್ ಬ್ಯಾನ್ ಬಳಿಕವೂ ಖೋಟಾನೋಟು ಹಾವಳಿ ತಪ್ಪಿಲ್ಲ. ಇತ್ತೀಚೆಗೆ ದೆಹಲಿಯಲ್ಲಿ ಪ್ರತಿಷ್ಠಿತ ಬ್ಯಾಂಕ್`ನ ಎಟಿಎಂನಲ್ಲೇ  ನಕಲಿ ನೋಟುಗಳು ಬಂದಿರುವ ಸುದ್ದಿ ನೋಡಿರುತ್ತೀರಿ. ಚೆನ್ನೈನಲ್ಲೂ 30ಕ್ಕೂ ಅಧಿಕ ನಕಲಿ ನೋಟುಗಳು ಸಿಕ್ಕ ಬಗ್ಗೆ ವರದಿಯಾಗಿದೆ. ಹಾಗಾದ್ರೆ ಟಿಎಂಗಳಲ್ಲಿ  ನಕಲಿ ನೋಟು ಬದುಬಿಟ್ಟರೆ ಏನು ಮಾಡಬೇಕು..? ಇಲ್ಲಿವೆ ಟಿಪ್ಸ್.


1, ಟಿಎಂನಲ್ಲಿ ನಕಲಿ ನೋಟು ಬಂದರೆ ಡ್ರಾ ಮಾಡಿದ ಚೀಟಿಯನ್ನ ಭದ್ರವಾಗಿಟ್ಟುಕೊಳ್ಳಿ
2. ಎಂಟಿಎಂ ಮೆಶಿನ್ ಬಳಿ ಇದ್ದಾಗಲೇ ನೋಟಿನ ಅಸಲಿಯತ್ತನ್ನ ಪರೀಕ್ಷಿಸಿಕೊಳ್ಳಿ, ಬಳಿಕ ನಕಲಿ ಎಂದು ಅರಿವಿಗೆ ಬಂದರೆ ಎಟಿಎಂ ಕ್ಯಾಮೆರಾ ಕಡೆ ನೋಟನ್ನ ತೋರಿಸಿ.
3. ಬಳಿಕ ಟಿಎಂ ಡ್ರಾ ಚೀಟಿ ಜೊತೆಗೆ ಸಮೀಪದ ಬ್ಯಾಂಕ್`ಗೆ ತೆರಳಿ ಹಣ ಬದಲಿಸಿಕೊಡಲು ಮನವಿ ಮಾಡಿ. ಮೊಬೈಲ್ ಸಂದೇಶವನ್ನೂ ನೀಡಿ.
4. ಬ್ಯಾಂಕಿನವರು ಹಣ ಬದಲಿಸಿಕೊಡಲು ನಿರಾಕರಿಸಿದರೆ ಆರ್`ಬಿಐ ಶಾಖಾ ಕಚೇರಿಗೆ ಮಾಹಿತಿ ಕೊಡಿ ಅಥವಾ ಇಮೇಲ್, ಪತ್ರದ ಮೂಲಕವೂ ತಿಳಿಸಿ.
5. ನೋಟುಗಳನ್ನ ನಾಶಮಾಡದೇ ಭದ್ರವಾಗಿಟ್ಟುಕೊಂಡು ಪೊಲೀಸ್ ಠಾಣೆಗೆ ದೂರು ಕೊಡಿ.

ವೆಬ್ದುನಿಯಾವನ್ನು ಓದಿ