ಮೂರು ತಿಂಗಳಲ್ಲಿ ಐದು ಬಾರಿ ಹೋಂ ಕ್ವಾರಂಟೈನ್ ಗೊಳಗಾದ ಪೊಲೀಸ್ ಆಯುಕ್ತ ಭಾಸ್ಕರ ರಾವ್

ಶನಿವಾರ, 18 ಜುಲೈ 2020 (13:21 IST)
ಬೆಂಗಳೂರು: ಕೊರೋನಾ ಸಮಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು ಎಷ್ಟು ಅಪಾಯದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಇದುವೇ ಸಾಕ್ಷಿ.


ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಕಳೆದ ಮೂರು ತಿಂಗಳಿನಿಂದ ಐದನೇ ಬಾರಿಗೆ ಹೋಂ ಕ್ವಾರಂಟೈನ್ ಗೊಳಗಾಗಿದ್ದಾರಂತೆ! ಇದೀಗ ತಮ್ಮ ಡ್ರೈವರ್ ಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನಲೆಯಲ್ಲಿ ಭಾಸ್ಕರ ರಾವ್ 4 ದಿನ ಕ್ವಾರಂಟೈನ್ ನಲ್ಲಿರಲಿದ್ದಾರೆ.

ಈಗಾಗಲೇ ಹಲವು ಬಾರಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಪೊಲೀಸರಾದ ನಮಗೆ ಇದು ಅನಿವಾರ್ಯ. ಆದರೆ ನಮಗಾಗಿ ನಿಮ್ಮ ಹಾರೈಕೆ ಸದಾ ಇರಲಿ ಎಂದು ಭಾಸ್ಕರ್ ರಾವ್ ಆಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ