ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಯೂ ಇಲ್ಲ, ಸೆಖೆಯೂ ಇಲ್ಲ. ಒಟ್ಟಾರೆ ಮೋಡ ಕವಿದ ವಾತಾವರಣ. ಜತೆಗೆ ಒಂದು ರೀತಿಯ ಚಳಿ. ಇದರಿಂದಾಗಿಯೇ ನಗರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆಯೇ?
ಅದರಲ್ಲೂ ಕೊರೋನಾದಿಂದಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಇದು ಆತಂಕಕಾರಿ ವಿಚಾರ.
ಇದಕ್ಕೆಲ್ಲಾ ಬದಲಾದ ಶೈತ್ಯ ಹವಾಗುಣವೇ ಕಾರಣವಾಯಿತೇ ಎಂಬ ಅನುಮಾನ ಮೂಡಿದೆ. ಹಲವು ತಜ್ಞರೂ ಜೂನ್ ನಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಕೊರೋನಾ ಸಂಖ್ಯೆ ಹೆಚ್ಚಳವಾಗಬಹುದು ಎಂದು ಮೊದಲೇ ಎಚ್ಚರಿಕೆ ನೀಡಿದ್ದರು. ಅದೀಗ ನಿಜವಾಗುತ್ತಿರುವಂತಿದೆ.