ಲಾಕ್ ಡೌನ್ ಇಫೆಕ್ಟ್: ಮಕ್ಕಳ ಮನಸ್ಸು ಅರಿತು ನಡೆಯಿರಿ

ಸೋಮವಾರ, 27 ಏಪ್ರಿಲ್ 2020 (09:07 IST)
ಬೆಂಗಳೂರು: ಸದಾ ಮನೆಯಿಂದ ಹೊರಹೋಗಿ ಆಟವಾಡಿಕೊಂಡಿರಲು ಬಯಸುವ ಮಕ್ಕಳಿಗೆ ಲಾಕ್ ಡೌನ್ ಜೈಲಿನಂತಾಗಿದೆ. ಹೊರಗೆ ಹೋಗುವಂತಿಲ್ಲ, ಪಕ್ಕದ ಮನೆಯ ಮಕ್ಕಳೊಂದಿಗೆ ಆಡುವಂತಿಲ್ಲ. ಮನೆಯೊಳಗೇ ಬಂಧಿಯಾಗಿ ಮಕ್ಕಳೂ ಒಂದು ರೀತಿ ಖಿನ್ನರಾಗುತ್ತಿದ್ದಾರೆ.


ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಪೋಷಕರು ಈಗ ಅತೀ ಎಚ್ಚರವಹಿಸಬೇಕಾಗಿದೆ. ಆದಷ್ಟು ಅವರ ಜತೆ ಕಾಲ ಕಳೆಯಲು ನೋಡಿ. ಅವರ ಜತೆ ಮಗುವಾಗಿ ಆಡಿ, ಕ್ರಾಫ್ಟ್ ಮಾಡಿ.

ಆದರೆ ಯಾವುದೇ ಕಾರಣಕ್ಕೂ ಓದು, ಬರಿ ಎಂದು ಒತ್ತಡ ಹೇರುವುದು, ಸಿಡುಕುವುದು ಮಾಡುತ್ತಿರಬೇಡಿ. ಇದರಿಂದ ಅವರ ಮನಸ್ಸಿನ ಮೇಲೂ ಒತ್ತಡ ಬೀಳುವ ಸಾಧ‍್ಯತೆ ಹೆಚ್ಚು. ಸಾಧ್ಯವಾದರೆ ಮನೆಯೊಳಗೇ ಅವರ ಜತೆಗೆ ನೀವೂ ಆಡಿ. ಇದರಿಂದ ನಿಮ್ಮ ಮನಸ್ಸೂ ಹಗುರವಾಗುತ್ತದೆ. ಯಾರೂ ಇಲ್ಲ ಎಂಬ ಭಾವನೆ ಯಾವುದೇ ಕಾರಣಕ್ಕೂ ಅವರ ಮನಸ್ಸಿಗೆ ಸುಳಿಯಲು ಅವಕಾಶ ಕೊಡಬೇಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ