ಇದೇ ತಿಂಗಳು ಅಪ್ಪಳಿಸಲಿದೆ ಕೊರೋನಾ ಮೂರನೇ ಅಲೆ

ಮಂಗಳವಾರ, 3 ಆಗಸ್ಟ್ 2021 (12:50 IST)
ನವದೆಹಲಿ: ದೇಶದಲ್ಲಿ ಕೊರೋನಾ ಮೂರನೇ ಅಲೆ ಭೀತಿ ಆವರಿಸಿದ್ದು, ಇದೇ ತಿಂಗಳು ಪ್ರಕರಣ ಹೆಚ್ಚಾಗುವ ಸಾಧ‍್ಯತೆಯಿದೆ.


ಕೇರಳ, ಮಹಾರಾಷ್ಟ್ರ  ರಾಜ್ಯಗಳಲ್ಲಿ ಈಗಾಗಲೇ ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಕಾರಣಕ್ಕೆ ಕರ್ನಾಟಕದ ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದಲ್ಲಂತೂ ಪ್ರತಿನಿತ್ಯ 20 ಸಾವಿರಕ್ಕೂ ಅಧಿಕ ಪ್ರಕರಣಗಳು ಕಂಡುಬರುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ.

ಆರೋಗ್ಯ ತಜ್ಞರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಈ ತಿಂಗಳು ಕೊರೋನಾ ದೇಶಕ್ಕೆ ಅಪ್ಪಳಿಸಲಿದ್ದು, ಅಕ್ಟೋಬರ್ ವೇಳೆಗೆ ಪ್ರಕರಣಗಳು ತೀವ್ರಗೊಳ್ಳಲಿವೆ ಎಂದಿದ್ದಾರೆ. ಹೀಗಾಗಿ ಈಗಿನಿಂದಲೇ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ