ಭಾರತದ ಕೊರೋನಾ ವ್ಯಾಕ್ಸಿನ್ ತಯಾರಿ ಎಲ್ಲಿಯವರೆಗೆ ಬಂತು?

ಶುಕ್ರವಾರ, 14 ಆಗಸ್ಟ್ 2020 (11:24 IST)
ನವದೆಹಲಿ: ರಷ್ಯಾ ಈಗಾಗಲೇ ಕೊರೋನಾಗೆ ವ್ಯಾಕ್ಸಿನ್ ಕಂಡುಕೊಂಡಿರುವುದಾಗಿ ಘೋಷಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳು ಕೊರೋನಾ ತಡೆ ವ್ಯಾಕ್ಸಿನ್ ತಯಾರಿಯ ಅಂತಿಮ ಹಂತದಲ್ಲಿರುವುದಾಗಿ ಹೇಳಿಕೊಳ್ಳುತ್ತಿವೆ. ಭಾರತವೂ ಈ ಪಟ್ಟಿಯಲ್ಲಿದೆ.


ಹಾಗಿದ್ದರೆ ಭಾರತದ ವ್ಯಾಕ್ಸಿನ್ ತಯಾರಿ ಎಲ್ಲಿಯವರೆಗೆ ಬಂದಿದೆ? ಈ ಮೊದಲು ಆಗಸ್ಟ್ 15 ರೊಳಗಾಗಿ ವ್ಯಾಕ್ಸಿನ್ ತಯಾರಿಸುವುದಾಗಿ ಭಾರತದ ತಜ್ಞರು ಗುರಿ ಹಾಕಿಕೊಂಡಿದ್ದರು. ಆದರೆ ಇನ್ನೂ ವ್ಯಾಕ್ಸಿನ್ ತಯಾರಿ ಅಂತಿಮ ಹಂತದಲ್ಲಿದೆಯಷ್ಟೇ.

ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ತಜ್ಞರುಗಳೊಂದಿಗೆ ಸಭೆ ನಡೆಸಿದ್ದು, ಎಲ್ಲಾ ವರ್ಗದವರಿಗೂ ಕೈಗೆಟುಕುವ ರೀತಿಯಲ್ಲಿ ವ್ಯಾಕ್ಸಿನ್ ತಯಾರಿಸಲು ಸೂಚನೆ ನೀಡಿದೆ. ಅಲ್ಲದೆ, ಒಂದು ವೇಳೆ ಭಾರತ ಲಸಿಕೆ ಕಂಡುಕೊಳ್ಳಲು ಯಶಸ್ವಿಯಾದರೆ ನೆರೆಯ ರಾಷ್ಟ್ರಗಳಿಗೂ ವಿತರಿಸಿ ಸಹಾಯ ಮಾಡಲಿದೆ. ಈಗಾಗಲೇ ಭಾರತೀಯ ಮೂಲದ ಭಾರತ್ ಬಯೋಟೆಕ್ ಮತ್ತು ಜಿಡಸ್ ಕಾಲ್ಡಿಯಾ ಲಸಿಕೆ ತಯಾರಿ ಮೂರನೇ ಟ್ರಯಲ್ ಹಂತದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ