ಭಾರತೀಯ ನೌಕಾಪಡೆಯ ಮೇಲೂ ಕೊರೊನಾ ವೈರಸ್ ದಾಳಿ; 28ಕ್ಕೂ ಹೆಚ್ಚು ಸಿಬ್ಬಂದಿಗಳಲ್ಲಿ ವೈರಸ್
ಶನಿವಾರ, 18 ಏಪ್ರಿಲ್ 2020 (11:05 IST)
ನವದೆಹಲಿ : ದೇಶದೆಲ್ಲೆಡೆ ಅಟ್ಟಹಾಸ ಮೇರೆದ ಕೊರೊನಾ ವೈರಸ್ ಇದೀಗ ಭಾರತೀಯ ನಾಕಾಪಡೆಯ ಮೇಲೂ ದಾಳಿ ನಡೆಸಿದೆ.
ನೌಕಾಪಡೆಯ 28ಕ್ಕೂ ಹೆಚ್ಚು ಸಿಬ್ಬಂದಿಗಳಲ್ಲಿ ಕೊರೊನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ , ಎಲ್ಲಾ ನೌಕಾಧಿಕಾರಿಗಳನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ.
ಏ.7ರಂದು ನಾವಿಕನೊಬ್ಬನಿಗೆ ಸೋಂಕು ತಗಲಿತ್ತು. ಇದೀಗ ನೌಕಾಪಡೆಯ 28ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಕೊರೊನಾ ವೈರಸ್ ತಗಲಿದ್ದು, ಮುಂಬೈ ನೌಕಾಪಡೆ ಆಸ್ಪತ್ರೆಯಲ್ಲಿ ಕ್ವಾರಂಟೈನ್ ಇಡಲಾಗಿದೆ. ಆದಕಾರಣ ಮುಂಬೈ ನೌಕನೆಲೆ ಕಂಟೈನ್ ಮೆಂಟ್ ಜೋನ್ ಎಂದು ಗುರುತಿಸಲಾಗಿದೆ.