ಕೊರೊನಾ ಚೀನಾ ಲ್ಯಾಬ್ ನಲ್ಲಿ ತಯಾರಾದ ವೈರಸಾ? ಈ ಬಗ್ಗೆ ಚೀನಾ ಹೇಳಿದ್ದೇನು ಗೊತ್ತಾ?

ಶನಿವಾರ, 18 ಏಪ್ರಿಲ್ 2020 (06:54 IST)
ಚೀನಾ : ಕೊರೊನಾ ವೈರಸ್ ಚೀನಾ ಲ್ಯಾಬ್ ನಲ್ಲಿ ಸೃಷ್ಟಿಯಾದುದ್ದಲ್ಲ, ಇದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ  ತಿಳಿಸಿದೆ.


ಇಡೀ ವಿಶ್ವವನ್ನೇ ಬಲಿ ಪಡೆಯುತ್ತಿರುವ ಹೆಮ್ಮಾರಿ ಕೊರೊನಾ ವೈರಸ್ ಮೊದಲು ಕಾಣಿಸಿಕೊಂಡಿದ್ದು, ಚೀನಾದ ವುಹಾನ್ ನಲ್ಲಿವಾದ್ದರಿಂದ ಇದು ಚೇನಾದ ಲ್ಯಾಬ್ ನಲ್ಲಿ ತಯಾರಾದ ವೈರಸ್. ಇದನ್ನು ಚೀನಾ ಬಯೋವೆಪನ್ ಆಗಿ ಬಳಸುತ್ತಿದೆ ಎಂಬ ಮಾತುಗಳು  ಜಾಗತಿಕ ಮಟ್ಟದಲ್ಲಿ ಕೇಳಿಬಂದಿವೆ.


ಈ ಬಗ್ಗೆ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝೋವೋ ಲಿಜಿಯಾನ್, ಕೊರೊನಾ ಚೀನಾದ ವೈರಸ್ ಅಲ್ಲ. ಇದು ಯಾವುದೇ ಲ್ಯಾಬ್ ನಲ್ಲಿ ಮಾಡಲ್ಪಟ್ಟಿಲ್ಲ. ಇದಕ್ಕೆ ಯಾವುದೇ ಸಾಕ್ಷಿ ಇಲ್ಲ. ಈ ಮಾತನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಹೇಳಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ