ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ, ಮಾಸ್ಕ ಧರಿಸದಿದ್ದರೆ ದಂಡ

ಶುಕ್ರವಾರ, 17 ಏಪ್ರಿಲ್ 2020 (11:03 IST)
ತುಮಕೂರು : ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ, ಮಾಸ್ಕ್ ಧರಿಸದಿದ್ದರೆ, ಮೂತ್ರ ಮಾಡಿದರೆ ದಂಡ ವಿಧಿಸುವುದಾಗಿ ತುಮಕೂರು ಕಮಿಷನರ್ ಭೂಬಾಲ ಆದೇಶಿಸಿದ್ದಾರೆ.


ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ತುಮಕೂರು ಕಮಿಷನರ್ ಭೂಬಾಲ ಆದೇಶ ಹೊರಡಿಸಿದ್ದು, ರಸ್ತೆಯಲ್ಲಿ ಮೊದಲು ಉಗುಳಿದರೆ 500ರೂ,  2ನೇ ಬಾರಿ ಉಗುಳಿದರೆ 1000ರೂ ದಂಡ ವಿಧಿಸಲಾಗುವುದು.

ಹಾಗೇ ಮಾಸ್ಕ್ ಧರಿಸದಿದ್ದರೆ ಮೊದಲು 100ರೂ ದಂಡ, 2ನೇ ಬಾರಿಗೆ 200ರೂ ದಂಡ ತೆರಬೇಕಾಗುತ್ತದೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡಿದರೆ 200ರೂ. ವರೆಗೂ ದಂಡ ಕಟ್ಟಲು ಆದೇಶಿಸಲಾಗಿದೆ . ತುಮಕೂರಿನಲ್ಲಿ ನಾಳೆಯಿಂದ ಈ ನಿಯಮ ಜಾರಿಗೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ