ಕೊರೋನಾ ಪ್ರಕರಣದಲ್ಲಿ ದಾಖಲೆ ಮಾಡಿದ ಕೇರಳ

ಸೋಮವಾರ, 20 ಜುಲೈ 2020 (11:11 IST)
ತಿರುವನಂತಪುರಂ: ಇದುವರೆಗೆ ಕೊರೋನಾ ಪ್ರಕರಣವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದೇವೆ ಎಂದು ಬೀಗುತ್ತಿದ್ದ ಕೇರಳ ಈಗ ತಲೆ ಕೆಡಿಸಿಕೊಂಡು ಕೂರುವ ಸ್ಥಿತಿಯಲ್ಲಿದೆ.

 

ನಿನ್ನೆ ಕೇರಳದಲ್ಲಿ ದಾಖಲೆಯ 821 ಪ್ರಕರಣಗಳು ಪತ್ತೆಯಾಗಿವೆ. ಇದು ಇದುವರೆಗಿನ ದಾಖಲೆಯಾಗಿದೆ. ಇದೀಗ ಸಮುದಾಯ ಮಟ್ಟದಲ್ಲೂ ಹರಡಿದ್ದು ಕೇರಳ ಸರ್ಕಾರಕ್ಕೆ ಹೊಸ ತಲೆನೋವಾಗಿದೆ.

ಹೀಗಾಗಿ ಈಗಾಗಲೇ ಹಲವೆಡೆ ಟ್ರಿಪಲ್ ಲಾಕ್ ಡೌನ್ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಪ್ರಯತ್ನ ನಡೆಸಿದೆ. ಕರ್ನಾಟಕ ಈಗಾಗಲೇ ಕೊರೋನಾದ ಹಾಟ್ ಸ್ಪಾಟ್ ಆಗುತ್ತಿದ್ದು, ಕೇರಳದಲ್ಲೂ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ