ಸ್ಪಾಟ್ ಫಿಕ್ಸಿಂಗ್ ತನಿಖೆಗೆ 3 ಸದಸ್ಯರ ಸಮಿತಿ ನೇಮಕಕ್ಕೆ ಬಿಸಿಸಿಐ ಸಲಹೆ

ಸೋಮವಾರ, 21 ಏಪ್ರಿಲ್ 2014 (15:01 IST)
ನವದೆಹಲಿ:  ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದಿಂದ ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿರುವ ಬಿಸಿಸಿಐ ಭಾನುವಾರ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಮೂರು ಸದಸ್ಯರ ಸಮಿತಿಯನ್ನು ನೇಮಿಸುವಂತೆ ಸುಪ್ರೀಂಕೋರ್ಟ್‌ಗೆ ಸಲಹೆ ಮಾಡಿದೆ.
 
ಮುಂಬೈನಲ್ಲಿ ನಡೆದ ಸಭೆಯಲ್ಲಿ ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ, ಕೊಲ್ಕತ್ತಾ ಹೈಕೋರ್ಟ್ ಮಾಜಿ ಮುಖ್ಯನ್ಯಾಯಮೂರ್ತಿ ಜೆ.ಎನ್. ಪಟೇಲ್ ಮತ್ತು ಸಿಬಿಐ ಮಾಜಿ ನಿರ್ದೇಶಕ ಆರ್.ಕೆ. ರಾಘವಲನ್ ಅವರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲು ಸಲಹೆ ಮಾಡಿದೆ.
 
 ಮಾಜಿ ಮಂಡಳಿ ಅಧ್ಯಕ್ಷ ಶಶಾಂತ್ ಮನೋಹರ್ ವಿದರ್ಭ ಕ್ರಿಕೆಟ್ ಸಂಸ್ಥೆ ಪ್ರತಿನಿಧಿಯಾಗಿ ಭಾಗವಹಿಸಿದ್ದಾರೆ.ಕಳೆದ ವಿಚಾರಣೆಯಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಬಗ್ಗೆ ನ್ಯಾಯಯುತ ತನಿಖೆ ನಡೆಸುವ ವ್ಯಕ್ತಿಗಳನ್ನು ಹೆಸರಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ನೀಡಿರುವ ಸಲಹೆಯನ್ನು ಏಪ್ರಿಲ್ 22ರಂದು ಮುಂದಿನ ವಿಚಾರಣೆಯಲ್ಲಿ ಸುಪ್ರೀಕೋರ್ಟ್ ಪರಿಶೀಲನೆ ಮಾಡಿ ಆದೇಶವನ್ನು ನೀಡಲಿದೆ.
 

ವೆಬ್ದುನಿಯಾವನ್ನು ಓದಿ