ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್
ಜನವರಿ 3 ರಂದು ಆಫ್ರಿಕಾ ವಿರುದ್ಧ ಕೇಪ್ ಟೌನ್ ನಲ್ಲಿ ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯವಾಡಲಿದೆ. ಮೊದಲ ಟೆಸ್ಟ್ ಪಂದ್ಯವನ್ನು ಸೋತಿರುವುದರಿಂದ ಸರಣಿ ಉಳಿಸಿಕೊಳ್ಳಲು ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.
ಇದೀಗ ಭಾರತ ಐಚ್ಚಿಕ ಪ್ರಾಕ್ಟೀಸ್ ಸೆಷನ್ ನಡೆಸಿದೆ. ಈ ಪ್ರಾಕ್ಟೀಸ್ ಸೆಷನ್ ನಲ್ಲಿ ರವೀಂದ್ರ ಜಡೇಜಾ ಭಾಗಿಯಾಗಿರುವುದು ವಿಶೇಷ. ಕಳೆದ ಪಂದ್ಯದಲ್ಲಿ ಬೆನ್ನು ನೋವಿನ ಕಾರಣದಿಂದ ಅವರು ಹೊರಗುಳಿದಿದ್ದರು.
ಆದರೆ ಕಳೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಪ್ರಾಕ್ಟೀಸ್ ಸೆಷನ್ ನಿಂದ ಹೊರಗುಳಿದಿದ್ದು ವಿಶ್ರಾಂತಿ ಪಡೆದಿದ್ದಾರೆ.