ಅನುಮಾನಾಸ್ಪದ ನಿರ್ಧಾರಗಳಿಂದ ಬಾಂಗ್ಲಾ ವಿರುದ್ಧ ಸರಣಿ ಸೋಲು : ವಿರಾಟ್ ಕೊಹ್ಲಿ

ಗುರುವಾರ, 2 ಜುಲೈ 2015 (14:31 IST)
ಬಾಂಗ್ಲಾದೇಶದಲ್ಲಿ ಸೋಲಿಗೆ ಅನುಮಾನಾಸ್ಪದ ನಿರ್ಧಾರ ಮತ್ತು ಸ್ಪಷ್ಟತೆಯ ಕೊರತೆ ಕಾರಣ ಎಂದು ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಆರೋಪಿಸುವ ಮೂಲಕ
ಕಂಪನ ಮೂಡಿಸಿದ್ದಾರೆ. ಕೊಹ್ಲಿ ಹೇಳಿಕೆಯನ್ನು ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ವಿರುದ್ಧ ದಾಳಿ ಎಂದೇ ವ್ಯಾಖ್ಯಾನಿಸಲಾಗಿದೆ. 
ಧೋನಿಯಿಂದ ಟೆಸ್ಟ್ ನಾಯಕತ್ವ ಸ್ವೀಕರಿಸಿರುವ ಕೊಹ್ಲಿ ತಮ್ಮ ಹೇಳಿಕೆ ಕುರಿತು ಯಾವುದೇ ಹೆಸರನ್ನು ಬಹಿರಂಗಪಡಿಸಿಲ್ಲ ಮತ್ತು ಹೆಚ್ಚು ವಿವರ ನೀಡಲು ಹೋಗಿಲ್ಲ.
 
ಅವರು ನಿಜವಾಗಲೂ ಉತ್ತಮ ಕ್ರಿಕೆಟ್ ಆಡಿದ್ದಾರೆ ಮತ್ತು ಪ್ರಾಮಾಣಿಕವಾಗಿ ನಮ್ಮ ನಿರ್ಧಾರ ಕೈಗೊಳ್ಳುವಿಕೆಯು  ಒಂದು ರೀತಿಯ ಅನುಮಾನಾಸ್ಪದವಾಗಿದ್ದು, ಮೈದಾನದಲ್ಲಿ ಅದು ವ್ಯಕ್ತವಾಗಿದೆ ಎಂದು ಕೊಹ್ಲಿ ಹೇಳಿದರು. 
 
 ಅವರು ಆಡಿದ ರೀತಿಯಿಂದ ಅವರಿಗೆ ಕ್ರೆಡಿಟ್ ಸಲ್ಲುತ್ತದೆ. ಆದರೆ ನಾವು ಮೊದಲ ಎರಡು ಪಂದ್ಯಗಳಲ್ಲಿ ಸ್ಪಷ್ಟ ಮನಸ್ಸಿನೊಂದಿಗೆ ಅಭಿವ್ಯಕ್ತಿಸಲು ಸಾಧ್ಯವಾಗದಿರುವುದು ಕೊರತೆಯಾಗಿದೆ ಎಂದು ಕೊಹ್ಲಿ ಹೇಳಿದರು. 
 
ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಧೋನಿಯನ್ನು ದೃಢವಾಗಿ ಬೆಂಬಲಿಸಿ, ತಮ್ಮ ನಾಯಕನಿಗಾಗಿ ಮೈದಾನದಲ್ಲಿ ಪ್ರಾಣ ಕೊಡಲು ಸಿದ್ಧ ಎಂದಿದ್ದರು.ಸುರೇಶ್ ರೈನಾ ಕೂಡ ಧೋನಿಗೆ ಬೆಂಬಲವಾಗಿ ನಿಂತಿದ್ದರು.
 
ಕೊಹ್ಲಿಯ ಕಾಮೆಂಟ್‌ಗಳಿಂದ ಏಕದಿನ ತಂಡದಲ್ಲಿ ಬಿರುಕು ಉಂಟಾಗಿರುವ ಸಾಧ್ಯತೆ ಕುರಿತು ಊಹಾಪೋಹ ಎದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಧೋನಿಗೆ ಬೆಂಬಲಿಸುತ್ತಿರಬಹುದೇ ಎಂಬ ಅನುಮಾನಕ್ಕೆ ಎಡೆಯಾಗಿದೆ. ಆದಾಗ್ಯೂ ಡ್ರೆಸಿಂಗ್ ರೂಂ.ನಲ್ಲಿ ಯಾವುದೇ ಒಡಕಿಲ್ಲ. ಹಿಂದಿನ ರೀತಿಯ ವಾತಾವರಣ ಡ್ರೆಸ್ಸಿಂಗ್ ರೂಂನಲ್ಲಿದೆ. ನಾವು ಕೆಲವು ಪಂದ್ಯ ಸೋತಿರಬಹುದು. ಆದರೆ ಹೆಚ್ಚು ಪಂದ್ಯಗಳನ್ನು ಗೆಲ್ಲುತ್ತೇವೆ ಎಂದು ಕೊಹ್ಲಿ ಹೇಳಿದರು. 
 

ವೆಬ್ದುನಿಯಾವನ್ನು ಓದಿ