ವಿರಾಟ್ ಕೊಹ್ಲಿ ತಂಟೆಗೆ ಹೋಗಬೇಡಿ: ಆಸ್ಟ್ರೇಲಿಯಾ ತಂಡಕ್ಕೆ ಗಿಲೆಸ್ಪಿ ಎಚ್ಚರಿಕೆ

ಗುರುವಾರ, 14 ಸೆಪ್ಟಂಬರ್ 2017 (14:18 IST)
ಆಸ್ಟ್ರೇಲಿಯಾ ಕ್ರಿಕೆಟಿಗರು ಸ್ಲೆಡ್ಜಿಂಗ್`ನಲ್ಲಿ ಎತ್ತಿದ ಕೈ. ಯಾವುದೇ ದೇಶದ ವಿರುದ್ಧದ ಸರಣಿಗೂ ಮುನ್ನ ಮಾತಿನ ಸಮರದ ಮೂಲಕ ಎದುರಾಳಿ ತಂಡವನ್ನ ಹಣಿಯಲು ಶುರು ಮಾಡುತ್ತಾರೆ. ಆದರೆ, ಈ ಬಾರಿ ಹಾಗೆ ಮಾಡಿದರೆ ಸಂಕಷ್ಟಕ್ಕೆ ತುತ್ತಾಗುತ್ತೀರಿ. ಪ್ರಮುಖವಾಗಿ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಟೆಗೆ ಹೋಗಬೇಡಿ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಜೇಸನ್ ಗಿಲೆಸ್ಪಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
 

ವಿರಾಟ್ ಕೊಹ್ಲಿಯನ್ನ ತಡೆಯಬೇಕೆಂದರೆ ಅಗ್ರೆಸ್ಸಿವ್ ಆಗಿ ಬೌಲಿಂಗ್ ಮಾಡಿ. ಆಧುನಿಕ ಕ್ರಿಕೆಟ್`ನ ಅತ್ಯುತ್ತಮ ಬ್ಯಾಟ್ಸ್`ಮನ್ ವಿರಾಟ್ ಕೊಹ್ಲಿಯ ತಂಟೆಗೆ ಹೋಗದೇ ಒಂಟಿಯಾಗಿ ಬಿಡಿ. ಅವರ ಜೊತೆ ಮಾತಿನ ಚಕಮಕಿ ಬೇಡ. ಸ್ವಲ್ಪ ಕಾಲ ಪಿಚ್ ಅಡ್ಜೆಸ್ಟ್ ಆದರೆ ತಡೆಯಲಾಗದು ಎಂದು ಸ್ಟೀವನ್ ಸ್ಮಿತ್ ಪಡೆಗೆ ಎಚ್ಚರಿಕೆ ನೀಡಿದ್ದಾರೆ.   

ಇದುವರೆಗೆ ಆಸ್ಟ್ರೇಲಿಯಾ ವಿರುದ್ಧ ಆಡಿರುವ 23 ಏಕದಿನ ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ 55.6 ಸರಾಸರಿಯಲ್ಲಿ 1003 ರನ್ ಸಿಡಿಸಿದ್ದಾರೆ.5 ಶತಕ ಸಿಡಿಸಿದ್ದು, 2 ಶತಕಗಳನ್ನ 2016ರಲ್ಲೇ ಸಿಡಿಸಿದ್ದಾರೆ.

 2014-15 ಸರಣಿಯ ಸಂದರ್ಭ ಪಂದ್ಯವೊಂದರಲ್ಲಿ ವೇಗಿ ಜೇಮ್ಸ್ ಫಾಲ್ಕ್`ನರ್ ವಿರಾಟ್ ಕೊಹ್ಲಿಯನ್ನ ಕೆಣಕಿ ಸರಿಯಾದ ಮರ್ಯಾದೆ ಮಾಡಿಸಿಕೊಂಡಿದ್ದರು. ನೀನು ನಿನ್ನ ಸಮಯ ವ್ಯರ್ಥ ಮಾಡ್ತಿದ್ದೀಯ. ನನ್ನ ವೃತ್ತಿ ಜೀವನದಲ್ಲಿ ನಿನ್ನ ಬೌಲಿಂಗ್`ನಲ್ಲಿ ಸಾಕಷ್ಟು ರನ್ ಹೊಡೆದಿದ್ದೇನೆ ಹೋಗಿ ಬೌಲ್ ಮಾಡು ಎಂದು ಉತ್ತರಿಸಿದ್ದರು.

2012ರಲ್ಲಿ ಆಸಿಸ್ ಆಟಗಾರರು ಕೊಹ್ಲಿ ಮೇಲೆ ಮೈಂಡ್ ಗೇಮ್ ಆರಂಭಿಸಿದ್ದಾಗ ರೊಚ್ಚಿಗೆದ್ದ ವಿರಾಟ್ ಕೊಹ್ಲಿ ಚೊಚ್ಚಲ ಸೆಂಚುರಿ ಸಿಡಿಸಿದ್ದರು. ನಂತರದ ಆಸೀಸ್ ವಿರುದ್ಧದ ಸರಣಿಯಲ್ಲೂ 4 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ