ಚೇತರಿಸಿಕೊಂಡ ಇಂಗ್ಲೆಂಡ್: 5 ವಿಕೆಟ್‌ಗೆ 131

ಶುಕ್ರವಾರ, 30 ಜನವರಿ 2015 (15:35 IST)
ಭಾರತದ 200 ರನ್ ಆಲೌಟ್‌ಗೆ ಉತ್ತರವಾಗಿ ಇಂಗ್ಲೆಂಡ್ ಒಂದು ಹಂತದಲ್ಲಿ 75 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದ್ದರೂ ನಂತರ ಚೇತರಿಸಿಕೊಂಡು 5 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ.  

ಇಂಗ್ಲೆಂಡ್‌ಗೆ 17 ಓವರುಗಳಲ್ಲಿ 70 ರನ್ ಗಳಿಸುವ ಸವಾಲು ಈಗ ಎದುರಾಗಿದೆ. ಜೋಸ್ ಬಟ್ಲರ್ 38 ರನ್ ಮತ್ತು ಜೇಮ್ಸ್ ಟೇಲರ್ 50 ರನ್ ಗಳಿಸಿ ಉತ್ತಮ ಜೊತೆಯಾಟವಾಡುತ್ತಿದ್ದು, ಭಾರತ ಗೆಲುವು ಕಬ್ಬಿಣದ ಕಡಲೆಯಾಗಿ ಉಳಿದಿದೆ. ಬಿನ್ನಿಯ ಮಾರಕ ಬೌಲಿಂಗ್ ದಾಳಿಗೆ 3 ವಿಕೆಟ್‌ಗಳು ದಕ್ಕಿವೆ.

ಶರ್ಮಾ ಅವರು ಒಂದು ವಿಕೆಟ್ ಮತ್ತು ಎ.ಆರ್. ಪಟೇಲ್ 1 ವಿಕೆಟ್ ಕಳಿಸಿದ್ದಾರೆ.  ಇಂಗ್ಲೆಂಡ್ ಬ್ಯಾಟಿಂಗ್ ಶಿಬಿರದಲ್ಲಿ ನಡುಕ ಹುಟ್ಟಿಸಿದ ಬಿನ್ನಿ ಮೂರು ವಿಕೆಟ್ ಕಬಳಿಸಿದ್ದಾರೆ. ಕೊನೆಯದಾಗಿ ಬೊಪಾರಾ ಸ್ಟುವರ್ಟ್ ಬಿನ್ನಿ ಬೌಲಿಂಗ್‌ನಲ್ಲಿ ಜಡೇಜಾಗೆ ಕ್ಯಾಚಿತ್ತು ಔಟಾದರು.

ಬಿನ್ನಿಗೆ ದಕ್ಕಿದ ಎರಡನೇ ವಿಕೆಟ್ ಮೊರ್ಗಾನ್ ಅವರದ್ದು. ಬಿನ್ನಿ ಬೌಲಿಂಗ್‌ನಲ್ಲಿ ಅವರು ಧವನ್‌ಗೆ ಕ್ಯಾಚಿತ್ತು ಔಟಾದರು.ಜೆಇ ರೂಟ್ ಬಿನ್ನಿ ಬೌಲಿಂಗ್‌‍ನಲ್ಲಿ ಅವರಿಗೇ ಕ್ಯಾಚಿತ್ತು ಔಟಾದರು.

ವೆಬ್ದುನಿಯಾವನ್ನು ಓದಿ