ಕ್ರಿಕೆಟ್ ಲೆಜೆಂಡ್ ಸರ್ ಡಾನ್ ಬ್ರಾಡ್ಮನ್‌ರ 10 ಅಚ್ಚರಿಯ ಸತ್ಯಗಳು

ಗುರುವಾರ, 27 ಆಗಸ್ಟ್ 2015 (16:38 IST)
ಆಸ್ಟ್ರೇಲಿಯಾದ ಕ್ರಿಕೆಟ್ ಲೆಜೆಂಡ್ ಸರ್ ಡೋನಾಲ್ಡ್ ಬ್ರಾಡ್ಮನ್ ಅವರ 107ನೇ ಜನ್ಮದಿನಾಚರಣೆಯಂದು ಅದ್ಭುತ ಬ್ಯಾಟ್ಸ್‌ಮನ್ ಕುರಿತ ಕೆಲವು ಆಸಕ್ತಿದಾಯಕ ಸತ್ಯಗಳು ಕೆಳಗಿವೆ

1.ಬಾಲಕನಾಗಿದ್ದಾಗ ಬ್ರಾಡ್ಮನ್ ಕ್ರಿಕೆಟ್ ಬ್ಯಾಟ್‌ನಲ್ಲಿ ನೀರಿನ ಟ್ಯಾಂಕ್ ಸ್ಟಾಂಡ್ ವಿರುದ್ಧ ಗಾಲ್ಫ್ ಚೆಂಡನ್ನು ಹೊಡೆಯುವ ಮೂಲಕ ಬ್ಯಾಟಿಂಗ್ ಕಲಿತರು.
2. ಶಾಲೆಯಲ್ಲಿ ಡಾನ್ ಬ್ರಾಡ್ಮನ್ ಅವರ ಮೆಚ್ಚಿನ ವಿಷಯ ಗಣಿತ.
 
3. ವೈವಿಧ್ಯದ ದಾಹ್ಲಿಯಾ ಸಸ್ಯಗಳಿಗೆ ಬ್ರಾಡ್ಮನ್ ಹೆಸರು ಇಡಲಾಗಿದೆ.
4. 1930ರಲ್ಲಿ ಬ್ರಾಡ್ಮನ್ ''ಎವೆರಿ ಡೇ ಇಸ್ ಎ ರೇನ್‌ಬೋ ಡೇ ಫಾರ್ ಮಿ ''ಎಂಬ ಹಾಡನ್ನು ಸಂಕಲನ ಮತ್ತು ಧ್ವನಿಮುದ್ರಣ ಮಾಡಿದರು. ಪಿಯಾನೊ ವಾದಕರಾಗಿ ಅವರು ಓಲ್ಡ್ ಫ್ಯಾಷನ್ಡ್ ಲಾಕೆಟ್ ಮತ್ತು ಅವರ ಬಂಗ್ಲೊ ಆಫ್ ಡ್ರೀಮ್ಸ್ ರೆಕಾರ್ಡ್ ಮಾಡಿದರು. 
5. ವೃತ್ತಿಜೀವನದ ಕೊನೆಯ ಇನ್ನಿಂಗ್ಸ್‌ನಲ್ಲಿ ಅವರಿಗೆ ಶತಕದ ಸರಾಸರಿ ಬಾರಿಸಲು 4 ರನ್ ಅಗತ್ಯವಿತ್ತು.ಅವರು ಸೊನ್ನೆಗೆ ಔಟಾದರು. ಔಟಾದ ಬಳಿ ''ಫ್ಯಾನ್ಸಿ ಡೂಯಿಂಗ್ ದೆಟ್'' ಎಂದು ಪ್ರತಿಕ್ರಿಯಿಸಿದ್ದರು. 
 
6. ರಾಜ್ಯ ಮತ್ತು ಟೆರಿಟರಿಯ ಎಲ್ಲಾ ರಾಜಧಾನಿಗಳಲ್ಲಿ ಎಬಿಸಿಯ ಅಂಚೆ ವಿಳಾಸ ಪಿಒ ಬಾಕ್ಸ್ 9994. ಇದು ಬ್ರಾಡ್ಮನ್ ಟೆಸ್ಟ್ ಸರಾಸರಿ 99.94ಕ್ಕೆ ನೀಡಿದ ಗೌರವವಾಗಿತ್ತು. 
7. 90ರನ್ ಆಸುಪಾಸಿನಲ್ಲಿ ಬ್ರಾಡ್ಮನ್ ಯಾವತ್ತೂ  ಔಟಾಗಿರಲಿಲ್ಲ. 
 
8.  1948ರಲ್ಲಿ  ಪ್ರಾದೇಶಿಕ ತಂಡ ಕಾತಿಯಾವಾರ್ ಮಹಾರಾಷ್ಟ್ರದ ವಿರುದ್ಧ ಪಂದ್ಯವನ್ನು ರದ್ದುಮಾಡಿತು. ಏಕೆಂದರೆ ಮಹಾರಾಷ್ಟ್ರದ ಬ್ಯಾಟ್ಸ್‌ಮನ್ ಬಾವ್ ಸಾಹಿಬ್ ನಿಂಬಾಲ್ಕರ್ 443 ರನ್ ಸ್ಕೋರ್ ಮಾಡಿದ್ದರು. ಬ್ರಾಡ್ಮನ್ ಅವರ 452 ರನ್ ದಾಖಲೆಯನ್ನು ಮುರಿಯುವುದು ಬ್ಯಾಟ್ಸ್‌ಮನ್‌‍ಗೆ ಸೌಜನ್ಯದ ನಡವಳಿಕೆಯಲ್ಲ ಎಂದು ಅವರು ನಂಬಿದ್ದರಿಂದ ಪಂದ್ಯ ರದ್ದು ಮಾಡಿದರು. 
 
9. ಕ್ರಿಕೆಟ್‌ಗೆ ನೀಡಿದ ಕೊಡುಗೆಯಿಂದ 1949ರಲ್ಲಿ ಅವರಿಗೆ ನೈಟ್ ಪದವಿ ನೀಡಲಾಯಿತು. 
10-ನೆಲ್ಸನ್ ಮಂಡೇಲಾ ಜೈಲಿನಿಂದ 27 ವರ್ಷಗಳ ಬಳಿಕ ಹೊರಬಂದ ಬಳಿಕ ಕೇಳಿದ ಮೊದಲ ಪ್ರಶ್ನೆ ಡಾನ್ ಬ್ರಾಡ್ಮನ್ ಇನ್ನೂ ಬದುಕಿದ್ದಾರಾ ಎನ್ನುವುದಾಗಿತ್ತು. 

ವೆಬ್ದುನಿಯಾವನ್ನು ಓದಿ