ಮೊದಲ ಟಿ 20: ಪಾಕಿಸ್ತಾನಕ್ಕೆ ಶ್ರೀಲಂಕಾ ವಿರುದ್ಧ 29 ರನ್ ಜಯ

ಶುಕ್ರವಾರ, 31 ಜುಲೈ 2015 (16:46 IST)
ಉಮರ್ ಅಕ್ಮಲ್ 24 ಎಸೆತಗಳಲ್ಲಿ ಬಿರುಸಿನ 46 ಮತ್ತು ಸೊಹೇಲ್ ತನ್ವಿರ್ ಮೂರು ವಿಕೆಟ್ ಕಬಳಿಕೆ ಮೂಲಕ ಪಾಕಿಸ್ತಾನ ಅಗ್ರ ಶ್ರೇಯಾಂಕದ ಶ್ರೀಲಂಕಾ ತಂಡವನ್ನು ಟಿ20 ಪಂದ್ಯದಲ್ಲಿ 29 ರನ್‌ಗಳಿಂದ ಸೋಲಿಸಿದೆ.  ಮೊದಲಿಗೆ ಬ್ಯಾಟಿಂಗ್ ಆಡಿದ ಪಾಕಿಸ್ತಾನ  5 ವಿಕೆಟ್ ಕಳೆದುಕೊಂಡು 175 ರನ್ ಪೇರಿಸಿತು ಮತ್ತು ಹಾಲಿ ವಿಶ್ವ ಟ್ವೆಂಟಿ 20 ಚಾಂಪಿಯನ್ನರನ್ನು ಹಗಲುರಾತ್ರಿ ಪಂದ್ಯದಲ್ಲಿ 146ರನ್‌ಗೆ ನಿರ್ಬಂಧಿಸಿತು. 
 
 ಶೋಯಬ್ ಮಲಿಕ್ ಜೊತೆ  ನಾಲ್ಕನೇ ವಿಕೆಟ್‌ಗೆ 81 ರನ್ ಜೊತೆಯಾಟದಲ್ಲಿ  ಅಕ್ಮಲ್ ಮೂರು ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರುಗಳನ್ನು ಬಾರಿಸಿದರು. ಮಲಿಕ್ 31 ರನ್ ಹೊಡೆದು ಅಜೇಯರಾಗಿ ಉಳಿದರು. 
 
 
ಅಹ್ಮದ್ ಶೆಹಜಾದ್  38 ಎಸೆತಗಳಲ್ಲಿ 46 ರನ್ ಕೊಡುಗೆ ನೀಡಿದರು. ಆದರೆ ಪಾಕಿಸ್ತಾನ ಅಂತಿಮ ಆರು ಓವರುಗಳಲ್ಲಿ 70 ರನ್ ಬಾರಿಸಿದಾಗ ಶ್ರೀಲಂಕಾ ಬೌಲಿಂಗ್ ಹದ ತಪ್ಪಿತು.
 
 ಶ್ರೀಲಂಕಾದ ನಾಯಕ ಲಸಿತ್ ಮಾಲಿಂಗಾ ಅತ್ಯಂತ ದುಬಾರಿ ಬೌಲರ್ ಎನಿಸಿ ನಾಲ್ಕು ಓವರುಗಳಲ್ಲಿ 46 ರನ್ ನೀಡಿದರು. ಶ್ರೀಲಂಕಾ ಬ್ಯಾಟಿಂಗ್ ನೀರಸವಾಗಿ ಆರಂಭಿಸಿತು. ಕುಸಲ್ ಪೆರೀರಾ  ಇನ್ನಿಂಗ್ಸ್‌ ಮೂರನೇ ಎಸೆತದಲ್ಲಿ ಔಟಾದರು  ಮತ್ತು ದಿಲ್ಶನ್ ಮುಂದಿನ ಓವರಿನಲ್ಲಿ ಔಟಾದಾಗ ಶ್ರೀಲಂಕಾ 2 ವಿಕೆಟ್ ಕಳೆದುಕೊಂಡು 13 ರನ್ ಗಳಿಸಿತ್ತು. 
 
 ಪಾಕ್ ಕಡೆ ಎಡಗೈ ವೇಗಿ ತನ್ವೀರ್ 29 ರನ್ ನೀಡಿ 3 ವಿಕೆಟ್ ಕಬಳಿಸಿದರೆ ಅನ್ವರ್ ಅಲಿ 27 ರನ್ ನೀಡಿ ಎರಡು ವಿಕೆಟ್ ಕಬಳಿಸಿದರು.  ಪಾಕಿಸ್ತಾನ ಪ್ರಸಕ್ತ ಪ್ರವಾಸದಲ್ಲಿ ತ್ರಿವಳ ಜಯ ಪೂರ್ಣಗೊಳಿಸಲು ಕಾತುರವಾಗಿದೆ.  ಪಾಕಿಸ್ತಾನ ಟೆಸ್ಟ್ ಸರಣಿಯನ್ನು 2-1ರಿಂದ ಮತ್ತು ಏಕದಿನ ಪಂದ್ಯವನ್ನು 3-2ರಿಂದ ಗೆದ್ದಿದೆ. 
 

ವೆಬ್ದುನಿಯಾವನ್ನು ಓದಿ