ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ ಓಲ್ಡ್ ಟ್ರಾಫರ್ಡ್‌ನಲ್ಲಿ ಜಯಗಳಿಸಿ ನಾಲ್ಕು ಟೆಸ್ಟ್ ಸರಣಿಯನ್ನು 1-1ರಿಂದ ಸಮಮಾಡಿಕೊಳ್ಳುವ ನಿರೀಕ್ಷೆಯಲ್ಲಿದ್ದು ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 98 ರನ್ ಸ್ಕೋರ್ ಮಾಡಿದೆ. ಇದರಿಂದ ಇಂಗ್ಲೆಂಡ್ 489 ರನ್ ಮುನ್ನಡೆ ಸಾಧಿಸಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಕುಕ್ 49ಕ್ಕೆ ನಾಟೌಟ್ ಆಗಿ ಉಳಿದಿದ್ದು, ಮೊದಲ ಇನ್ನಿಂಗ್ಸ್‌ನಲ್ಲಿ 254 ರನ್ ದಾಖಲಿಸಿದ ಜೋಯ್ ರೂಟ್ ಅಜೇಯ 23 ರನ್ ಗಳಿಸಿದ್ದಾರೆ.
ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಬೃಹತ್ ಮೊತ್ತ 589ಕ್ಕೆ 8 ವಿಕೆಟ್ ಡಿಕ್ಲೇರ್‌ಗೆ ಉತ್ತರವಾಗಿ ಪಾಕಿಸ್ತಾನ 198ರನ್‌ಗಳಿಗೆ ಸರ್ವಪತನ ಹೊಂದಿತ್ತು. ಆದರೆ ನಾಲ್ಕು ಬಾರಿ ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾದ ಬಳಿಕ ಕುಕ್ ಪಾಕಿಸ್ತಾನಕ್ಕೆ ಫಾಲೋಆನ್ ನೀಡದೇ ಪುನಃ ಬ್ಯಾಟಿಂಗ್ ಆಡಲು ನಿರ್ಧರಿಸಿದರು. ಇದರಿಂದ ಇಂಗ್ಲೆಂಡ್ ಪಾಕಿಸ್ತಾನವನ್ನು ಪುನಃ ಔಟ್ ಮಾಡುವುದಕ್ಕೆ ಬೇಕಾಗಿದ್ದ ಸಮಯ ಉಳಿದಿತ್ತು.